ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕಸ ವಿಲೇವಾರಿ ವಾಹನ ಕಾಲುವೆಗೆ ಉರುಳಿಬಿದ್ದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಹೊರವಲಯದಲ್ಲಿ ಮಲಪ್ರಭಾ ನದಿಯ ಬಾಳೇಕುಂದರಗಿ ಎಡೆದಂಡೆ ಕಾಲುವೆಗೆ ಪುರಸಭೆಗೆ ಸೇರಿದ ಕಸ ವಿಲೇವಾರಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಅವಘಡ ಸಂಭವಿಸಿದೆ.
ಪುರಸಭೆ ವಿಲೇವಾರಿ ವಾಹನ ಚಾಲಕ 48 ವರ್ಷದ ಗದಿಗೆಪ್ಪ ಕಾಮನ್ನವರ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಹೆಲ್ಪರ್ ಮಂಜುನಾಥ ಸಿಂಗನ್ನವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
16/12/2024 07:59 pm