ಬೆಳಗಾವಿ: ಮೂರು ತಿಂಗಳಿಂದ ವೇತನ ಸಿಗದ ಹಿನ್ನೆಲೆಯಲ್ಲಿ ಹೋಟೆಲ್ ಕಾರ್ಮಿಕ ಜಾಹೀರಾತು ಫಲಕದ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.
ಹೋಟೆಲ್ ಕಾರ್ಮಿಕ, ಜಾಹೀರಾತು ಫಲಕದ ಮೇಲೆ ಹತ್ತಿ ಬಟ್ಟೆಯಿಂದ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಕಾರ್ಮಿಕನ ಮನವೊಲಿಸಿದ ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ಕೆಳಗೆ ಇಳಿಸಿದ್ದಾರೆ. ಹೋಟೆಲ್ ಸಂಗಮ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಮಾಲೀಕ ಮೂರು ತಿಂಗಳಿಂದ ವೇತನ ನೀಡಿಲ್ಲ. ವೇತನ ಕೇಳಿದ ಸಂದರ್ಭದಲ್ಲಿ ಹಲ್ಲೆ ಮಾಡಿ ಧಮ್ಕಿ ಹಾಕಿದ ಆರೋಪ ಮಾಡಿದ ಕಾರ್ಮಿಕ, ಮನನೊಂದು 30 ಅಡಿ ಉದ್ದದ ಜಾಹೀರಾತು ಫಲಕವೇರಿ ಆತ್ಮಹತ್ಯೆ ಯತ್ನಿಸಿದ್ದಾನೆ.
PublicNext
16/12/2024 09:00 pm