ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮ್ಮು & ಕಾಶ್ಮೀರ ಸೇನಾ ವಾಹನ ಅಪಘಾತ: ಚಿಕ್ಕೋಡಿ ಮೂಲದ ಯೋಧ ಹುತಾತ್ಮ

ಚಿಕ್ಕೋಡಿ: ಜಮ್ಮು ಕಾಶ್ಮೀರ ಪೂಂಚ್ ಜಿಲ್ಲೆಯಲ್ಲಿ 160 ಅಡಿ ಕಂದಕಕ್ಕೆ ಸೇನಾ ವಾಹನ ಉಳಿದ ಬಿದ್ದ ದುರಂತದಲ್ಲಿ ಚಿಕ್ಕೋಡಿ ಮೂಲದ ಯೋಧ ಹುತಾತ್ಮನಾಗಿದ್ದಾನೆ.

ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಧರ್ಮರಾಜ ಸುಭಾಷ್ ಖೋತ ಮೃತ ಯೋಧನಾಗಿದ್ದಾನೆ. ಧರ್ಮರಾಜ ಸುಭಾಷ್ ಅವರು 24 ವರ್ಷಗಳಿಂದ ಇಂಡಿಯನ್ ಆರ್ಮಿಯಲ್ಲಿ ಯೋಧನಾಗಿ ದೇಶ ಸೇವೆ ಸಲ್ಲಿಸುತ್ತಿದ್ದರು. ಧರ್ಮರಾಜ ಸುಭಾಷ್ ಸಾವಿನಿಂದ ಇಡಿ ಗ್ರಾಮವೆ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದ್ದು, ಗ್ರಾಮದಲ್ಲಿ ಧರ್ಮರಾಜ ಸುಭಾಷ್ ಅವರ ಅಗಲಿಕೆಗೆ ಭಾವನಾತ್ಮಕ ಫ್ಲೆಕ್ಸ್‌ಗಳನ್ನ ಹಾಕಿ ಶ್ರದ್ಧಾನಂಜಲಿ ಸಲ್ಲಿಸಲಾಗಿದೆ.

ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಪ್ರದೇಶದಲ್ಲಿ ನಿನ್ನೆ (ಮಂಗಳವಾರ) ಸೇನಾ ವಾಹನವೊಂದು ದಾರಿ ತಪ್ಪಿ ಕಂದಕಕ್ಕೆ ಬಿದ್ದಿದೆ. ಇದರಲ್ಲಿದ್ದ 18 ಯೋಧರ ಪೈಕಿ 5 ಮಂದಿ ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Edited By : Vijay Kumar
PublicNext

PublicNext

25/12/2024 09:47 am

Cinque Terre

21.31 K

Cinque Terre

13

ಸಂಬಂಧಿತ ಸುದ್ದಿ