ಹುಬ್ಬಳ್ಳಿ: ಛೋಟಾ ಮುಂಬೈ ಎಂದೇ ಹೆಸರು ವಾಸಿಯಾಗಿರುವ ಹುಬ್ಬಳ್ಳಿಯಲ್ಲಿ, ಈಗ ಮರಳು ಮಾಫಿಯಾ ಸದ್ದು ಮಾಡುತ್ತಲೇ ರಾಜಾರೋಷವಾಗಿ ಸಾಗಾಟವಾಗುತ್ತಿದೆ. ಹುಬ್ಬಳ್ಳಿಯ ಸುತ್ತುಮುತ್ತ ರಿಂಗ್ ರೋಡ್ ನಲ್ಲಿ ಮರಳು ದಂಧೆ ಜೋರಾಗಿಯೇ ನಡೆಯುತ್ತಿದೆ. ಅಷ್ಟೇ ಅಲ್ದೆ ಭೂಮಿಯನ್ನು ಅಗೆದು ಮಣ್ಣು ಸಾಗಾಟ ಕೂಡ ಅಬ್ಬರದಿಂದ ನಡೆಯುತ್ತಿದೆ. ಇದು ಪೊಲೀಸರಿಗೂ, ಮತ್ತು ಭೂ ಇಲಾಖೆ ಅಧಿಕಾರಿಗಳಿಗೂ ಗೊತ್ತಿರುವ ವಿಚಾರ. ಆದ್ರೆ ಯಾಕೆ ಸುಮ್ಮನಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಮರಳು ಮತ್ತು ಮಣ್ಣು ಹೇಗೆಲ್ಲಾ ಸಾಗಾಟ ಆಗ್ತಿದೆ ಎಂಬುದು ಪಬ್ಲಿಕ್ ನೆಕ್ಸ್ಟ್ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ ನೋಡಿ....
ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ಮರಳು, ಮಣ್ಣು ಸಾಗಾಟ ಬಲು ಜೋರಾಗಿ ನಡೆಯುತ್ತಿದೆ. ಉಸುಗಿನ ರೇಟ್ ಮೊದಲಿಗಿಂತಲೂ ಹೆಚ್ಚಾಗಿದೆ. ರಾತ್ರೋ ರಾತ್ರಿ ಮರಳು ಸಾಗಾಟ ಜೋರಾಗಿದೆ. ಮರಳು ತುಂಬಿದ ಟಿಪ್ಪರ್ ಬಿಡಿಸಲು ಹಿಂದೆ ಒಂದು ಗುಂಪೇ ಇದೆ. ಇದರಲ್ಲಿ ಕೆಲವೊಂದಿಷ್ಟು ಪೊಲೀಸರು ಕೂಡ ಕೈ ಜೋಡಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಪರವಾನಗಿ ಇಲ್ಲದೇ ಮಣ್ಣು, ಮರಳು ಮಾಫಿಯಾ ದಂಧೆ ನಡೆಯುತ್ತಿದೆ. ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಭೂ ಇಲಾಖೆ ಅಧಿಕಾರಿ, ಪೊಲೀಸ್ ಇಲಾಖೆ ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದೆ, ಕಂಡೂ ಕಾಣದಂತೆ ಕಣ್ಣು ಮುಚ್ಚಿಕೊಂಡಿರುವುದನ್ನು ನೋಡಿದರೆ 'ಬೇಲಿಯೇ ಎದ್ದು ಹೊಲ ಮೇಯ್ದಂತೆ' ಎಂಬ ಗಾದೆ ಎಲ್ಲರಿಗೂ ನೆನಪು ಆಗುತ್ತೆ.
ಇನ್ನೂ ಈ ಮರಳು ದಂಧೆ ಟಿಪ್ಪರ್ ಮೂಲಕ ಎಲ್ಲಿ ಹೋಗುತ್ತವೆ. ಇದಕ್ಕೆ ಪರವಾನಿಗೆ ಇದೆಯಾ ಎಂಬುದನ್ನು ಯಾರು ಕೂಡ ಚೆಕ್ ಮಾಡುತ್ತಿಲ್ಲ. ಯಾಕೆಂದ್ರೆ ಅದರ ಹಿಂದೆ ಬೇರೆನೆ ನಡೆಯುತ್ತಿದೆ. ಲೈಸೆನ್ಸ್ ಇಲ್ಲದ ಅದೆಷ್ಟೋ ಟಿಪ್ಪರ್ ವಾಹನಗಳು ಮರಳು ತುಂಬಿಕೊಂಡು ಓಡಾಡುತ್ತಿವೆ. ರಾತ್ರಿ ವೇಳೆ ರಿಂಗ್ ರೋಡ್ ನಲ್ಲಿ ಮರಳು ವಾಹನ ಅತೀ ಚಾಣಾಕ್ಷತನದಿಂದ ದಾಟುತ್ತಿವೆ. ಹೀಗೆ ಅಕ್ರಮವಾಗಿ ಮರಳು ತುಂಬಿದ ಟಿಪ್ಪರ್ ಗಳು ಪಾಸ್ ಇಲ್ದೆ ದಾಟಲು ಕೆಲ ಪೊಲೀಸರು ಕೂಡ ಕೈ ಜೋಡಿಸುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ, ಏನೆಲ್ಲ ಕೈ ಚಳಕ ತೋರಿಸುತ್ತಿದ್ದಾರೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಎಳೆ ಎಳೆಯಾಗಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ನಲ್ಲಿ ಬಿಚ್ಚಿಡುತ್ತೇವೆ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
26/12/2024 04:05 pm