ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸ್ಪಿ ಗೆ ಮನವಿ

ಬೇಲೂರು: ಕೂಲಿಗಾಗಿ ಹೊರ ರಾಜ್ಯಗಳಿಂದ ಬಂದಿರುವ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರವೇ ವತಿಯಿಂದ ಪೊಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷರಾದ ವಿಎಸ್ ಭೋಜೇಗೌಡ ಅವರ ನೇತೃತ್ವದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಅವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ಕಾಫಿ ತೋಟಗಳ ಕೆಲಸಕ್ಕಾಗಿ ಅಸ್ಸಾಂ ಹಾಗೂ ಬಾಂಗ್ಲಾ ವಲಸಿಗರು ನಕಲಿ ಆದಾರ್ ಕಾರ್ಡ್ ಬಳಸಿಕೊಂಡು ಕಾಫಿ ತೋಟದಲ್ಲಿ ಗಾರೆ ಕೆಲಸ ಇನ್ನಿತರ ಕೆಲಸಗಳಿಗೆ ತಾಲೂಕಿನ ಬಿಕ್ಕೋಡು ಅರೇಹಳ್ಳಿ ಗೆಂಡೇಹಳ್ಳಿ ಚೀಕನಹಳ್ಳಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಬೀಡು ಬಿಟ್ಟಿದ್ದಾರೆ.

ಅಲ್ಲದೆ ಅವರ ಚಲನ ವಲನಗಳ ಬಗ್ಗೆ ತೋಟದ ಮಾಲೀಕರಾಗಲಿ ಅಥವಾ ಗುತ್ತಿಗೆದಾರರು ಗಮನ ಹರಿಸುತ್ತಿಲ್ಲ.ಇತ್ತೀಚಿನ ದಿನಗಳಲ್ಲಿ ಕೆಲವು ಒಂಟಿ ಮನೆಗಳಲ್ಲಿ ಕಳ್ಳತನ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೀಗೆ ಹಲವಾರು ರೀತಿಯ ಪ್ರಕರಣಗಳು ಹೆಚ್ಚಿದ್ದು ಇದರಿಂದ ಪೊಲೀಸ್ ಇಲಾಖೆಯವರಿಗೂ ಇದರಿಂದ ತೊಂದತೆಯಾಗಿದೆ.ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು.

ಶುಂಠಿ ವಾಷಿಂಗ್ ಪಾಯಿಂಟ್ ಹಾಗೂ ತೋಟದ ಮಾಲೀಕರನ್ನು ಕರೆಸಿ ಮಾಹಿತಿ ಕಲೆಹಾಕಿ ವಲಸಿಗರನ್ನು ಕೂಡಲೆ ಅವರ ರಾಜ್ಯಗಳಿಗೆ ಕಳಿಸಬೇಕು. ಮುಂದೆ ಇವರಿಂದ ಯಾವುದೇ ರೀತಿಯ ತೊಂದರೆಯಾದರೆ ಮಾಲೀಕರನ್ನೆ ನೇರ ಹೊಣೆಗಾರರನ್ನಾಗಿ ಮಾಡವೇಕು.ಇದರಿಂದ ಎನೇ ಮುಂದಿನ ದಿನಗಳಲ್ಲಿ ತೊಂದರೆಯಾದರೆ ಕರವೇ ವತಿಯಿಂದ ಉಗ್ರಪ್ರತಿಭಟನೆ ಮಾಡವೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್,ಉಪಾಧ್ಯಕ್ಷ ಮಂಜು ಆಚಾರ್, ಯುವ ಘಟಕದ ತಾಲೂಕು ಅಧ್ಯಕ್ಷ ಸತೀಶ್, ಕಾರ್ಯದರ್ಶಿ ರಾಕೇಶ್, ಕುಮಾರ್, ತೀರ್ಥಕುಮಾರ್, ಲೊಕೇಶ್, ಅಪಾರ ಪೊಲಿಸ್ ವರಿಷ್ಠಾಧಿಕಾರಿ ತಮ್ಮಯ್ಯ, ಸಿಪಿಐ ರೇವಣ್ಣ,ಜಗದೀಶ್ ಇದ್ದರು.

Edited By : PublicNext Desk
Kshetra Samachara

Kshetra Samachara

24/12/2024 05:37 pm

Cinque Terre

820

Cinque Terre

0

ಸಂಬಂಧಿತ ಸುದ್ದಿ