ಹಾಸನ : ವಿನಾಕಾರಣ ತಮ್ಮ ತಾತ ಪುಟ್ಟಸ್ವಾಮಿ ಗೌಡ ಅವರ ಹೆಸರು ತೆಗೆದುಕೊಂಡು ಮನಬಂದಂತೆ ಆರೋಪಗಳನ್ನು ಮಾಡಿರುವ ಎಂಎಲ್ಸಿ ಸೂರಜ್ ರೇವಣ್ಣ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ತಮ್ಮ ಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮಾಜಿ ಪ್ರಧಾನಿಗಳ ದೊಡ್ಡ ಮನೆತನದ ಕುಟುಂಬದ ಸದಸ್ಯನಾಗಿರುವ ಸೂರಜ್ ರೇವಣ್ಣ ಅವರು ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯಬೇಕು, ಇಲ್ಲವಾದರೆ ಜನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಪುಟ್ಟಸ್ವಾಮಿ ಗೌಡರ ಕಾಲದಲ್ಲಿ ತಮ್ಮ ತಾಯಿ ಹಾಗೂ ಅಜ್ಜಿಯ ಮೇಲೆ ಆಸಿಡ್ ಧಾಳಿ ನಡೆದೀತ್ತು ಎಂದು ಆಧಾರ ರಹಿತ ಆರೋಪ ಮಾಡಿರುವ ಸೂರಜ್ ರೇವಣ್ಣ ಅವರ ಹೇಳಿಕೆ ಖಂಡನೀಯ, ಈವರೆಗೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಕುಟುಂಬದವರೇ ಈ ಬಗ್ಗೆ ಮಾತನಾಡಿಲ್ಲ ಆದರೆ ಜನರಲ್ಲಿ ಗೊಂದಲ ಸೃಷ್ಟಿಸುವ ನಿಟ್ಟಿನಲ್ಲಿ ಅವರ ಹೇಳಿಕೆ ಸರಿಯಲ್ಲ ಎಂದರು.
ಯಾರೋ ನಾಲ್ಕು ಜನ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾರೆ ಎಂಬ ಕಾರಣದಿಂದ ಬಹಿರಂಗವಾಗಿ ಏನು ಬೇಕಾದರೂ ಮಾತನಾಡಬಹುದು ಎಂದು ಭಾವಿಸಿದ್ದರೆ ಅದು ತಪ್ಪು, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಮೂರು ವರ್ಷ ಕಳೆದರೂ ಈ ವರೆಗೆ ಒಂದೇ ಒಂದು ಗ್ರಾಮ ಪಂಚಾಯಿತಿ ಗಳಿಗೆ ಭೇಟಿ ನೀಡಿ ಸಭೆ ನಡೆಸಿಲ್ಲ. ಜನರ ಕಷ್ಟ ಸುಖಗಳನ್ನು ಆಲಿಸಿಲ್ಲ ಇದನ್ನು ಮಾಡುವ ಬದಲಾಗಿ ಬಹಿರಂಗವಾಗಿ ಬಾಯಿಗೆ ಬಂದಂತೆ ಮಾತಾಡುವುದನ್ನು ಅವರು ಬಿಡಬೇಕು ಎಂದರು.
Kshetra Samachara
03/01/2025 04:26 pm