ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ರೈತ ದಿನಾಚರಣೆಯಂದೇ ಬೆಳೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ಕಲಘಟಗಿ : ರಾಷ್ಟ್ರೀಯ ರೈತ ದಿನದಂದೇ ರಾಶಿ ಮಾಡಬೇಕಿದ್ದ ಭತ್ತದ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಬಣವೆಗಳು ಭಸ್ಮವಾದ ಘಟನೆ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.

ಮಹಾದೇವ ಸೂರಣ್ಣವರ ಎಂಬ ರೈತನಿಗೆ ಸೇರಿದ ಭತ್ತದ ಬಣವೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಎಂಟು ಎಕರೆಯಲ್ಲಿ ಬೆಳೆದಿದ್ದ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಭತ್ತದ ಬಣವೆಗಳು ಕಿಡಿಗೇಡಿಗಳ ಕೃತ್ಯದಿಂದ ಸುಟ್ಟು ಕರಕಲಾಗಿವೆ. ಈಗ ರೈತ ಕಣ್ಣೀರಿಡುವಂತಾಗಿದೆ.

ಈಗಾಗಲೇ ವಾರದ ಹಿಂದೆ ನಾಲ್ಕು ಎಕ್ಕರೆ ಜಮೀನಿನಲ್ಲಿ ಬೆಳೆದಿದ್ದ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆ ಜೋಳದ ಬಣವಿ ಕಿಡಗೇಡಿಗಳ ಕೃತ್ಯಕ್ಕೆ ಬಲಿಯಾಗಿದ್ದು ಪುನಃ ಎಂಟು ಲಕ್ಷಕ್ಕೂ ಅಧಿಕ ಮೌಲ್ಯದಷ್ಷು ಭತ್ತದ ಬಣವಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ.

ರೈತ ವರ್ಷಪೂರ್ತಿ ಕಷ್ಟಪಟ್ಟು ಸಾಲಸೂಲ ಮಾಡಿ ಬೆಳೆದಿದ್ದ ಬೆಳೆ ಸುಟ್ಟು ಕರಕಲಾಗಿದ್ದನ್ನು ರೈತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಹೊಟ್ಟೆಕಿಚ್ಚಿನಿಂದ ಬೆಂಕಿ ಇಟ್ಟ ಕಿಡಗೇಡಿಗಳಿಗೆ ಸೂಕ್ತ ಕ್ರಮವಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇಂತಹ ಘಟನೆ ನಡೆದರೂ ರೈತನ ಕುಟುಂಬಸ್ಥರ ಅಳಲು ಕೇಳಲು ಯಾವ ಅಧಿಕಾರಿಗಳೂ ಕೂಡ ಭೇಟಿ ನೀಡದಿರುವುದು ವಿಪರ್ಯಾಸವಾಗಿದೆ.

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/12/2024 03:50 pm

Cinque Terre

23.11 K

Cinque Terre

2

ಸಂಬಂಧಿತ ಸುದ್ದಿ