ಕುಂದಗೋಳ: ಗೌಡಗೇರಿ, ರಟಗೇರಿ, ಕಳಸ ಗ್ರಾಮಗಳಲ್ಲಿ ಹಾನಗಲ್ ಪಟ್ಟಣದ ಸೋಮನಾಥೇಶ್ವರ ಟ್ರೇಡರ್ಸ್ ಎಂಬ ವ್ಯಾಪಾರಿಗಳು ರೈತರಿಂದ ಮೆಕ್ಕೆಜೋಳ ಖರೀದಿಸಿ ವಂಚಿಸಲು ಯತ್ನಿಸಿ ವಾಪಸ್ ಹಣ ನೀಡಿದ್ದಾರೆ.
ಕುಂದಗೋಳ ತಾಲೂಕಿನ ಗೌಡಗೇರಿ, ರಟಗೇರಿ, ಕಳಸ ಗ್ರಾಮಗಳಲ್ಲಿ ಮೆಕ್ಕೆ ಜೋಳ ಖರೀದಿ ಮಾಡಿದ ಸೋಮನಾಥೇಶ್ವರ ಟ್ರೇಡರ್ಸ್ ವ್ಯಾಪಾರಿಗಳು ತೂಕ ಮಾಡುವ ವೇಳೆ ವಂಚಿಸಿ ರೈತರಿಗೆ ಮೋಸ ಮಾಡಿದ್ದಾನೆ. ಪೊಲೀಸ್ ಠಾಣೆಗೆ ದೂರು ದಾಖಲಿಸಲು ಆಗಮಿಸಿದ ರೈತ ನಿಂಗಪ್ಪ ಯತ್ನಳ್ಳಿ, ಗುಡದಯ್ಯಾ ಗಡ್ಡಿಗಾಲ, ಶೇಖಪ್ಪ ಲಮಾಣಿ, ಪಿ.ಎಸ್. ಸ್ವಾತಿಹಾಳಮಠ, ವೈ ಎಚ್.ಬಿರಣ್ಣವರ ಮಾತನಾಡಿ ತೂಕ ಮಾಡುವ ಸಂದರ್ಭದಲ್ಲಿ ರೈತರಿಗೆ ವಂಚಿಸಿ ಮೋಸ ಮಾಡಿದ್ದಾನೆ ಎಂದಿದ್ದಾರೆ.
ಮುಖ್ಯವಾಗಿ ವ್ಯಾಪಾರಿ ನೀಡಿದ ಬಿಲ್‌ನಲ್ಲಿ ರೈತರ ಹೆಸರನ್ನು ಸಹ ನಮೂದಿಸಿಲ್ಲ. ನಕಲಿ ಬಿಲ್ ನೀಡಿ ಸರಕಾರಕ್ಕೂ ಮೋಸ ಮಾಡುತ್ತಿದ್ದಾನೆ. ಈ ಅಂಗಡಿಯ ಮಾಲೀಕನ ಮೇಲೆ ಕ್ರಮ ಜರುಗಿಸಲು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಆಗಮಿಸಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ವ್ಯಾಪಾರಿಗೆ ವಿಷಯ ತಲುಪಿ ಪೊಲೀಸ್ ಠಾಣೆಗೆ ದೂರು ನೀಡದಂತೆ ರೈತರನ್ನೂ ತಡೆದ ಸಂತೈಸಿದ ವ್ಯಾಪಾರಿ 3 ಲಕ್ಷ 50 ಸಾವಿರ ಪರಿಹಾರ ನೀಡುವುದಾಗಿ ಹೇಳಿದ ಬಳಿಕ ರೈತರು ಚರ್ಚಿಸಿ ದೂರು ದಾಖಲಿಸದೆ ಹಣವನ್ನು ಪಡೆದು ಪರಸ್ಪರರು ಭಾಗ ಮಾಡಿಕೊಂಡಿದ್ದಾರೆ.
ಒಟ್ಟಾರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳೇ ಹಾಗೂ ಪೊಲೀಸರೇ ಇಂತಹ ವರ್ತಕರ ಬಗ್ಗೆ ಎಚ್ಚರ ವಹಿಸಿ ಅನ್ನದಾತನ ರಕ್ಷಣೆಗೆ ನಿಲ್ಲಬೇಕಿದೆ.
ಶ್ರೀಧರ್ ಪೂಜಾರ ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
24/12/2024 04:08 pm