ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ಕೇಸ್ ಯಾಕೆ ಕ್ಲೋಸ್ ಮಾಡ್ತೀರಿ? - ಗೃಹಸಚಿವರಿಗೆ ಶಾಸಕ ಟೆಂಗಿನಕಾಯಿ ಹೀಗೆ ಕೇಳಿದ್ಯಾಕೆ..?

ಹುಬ್ಬಳ್ಳಿ: ಇತ್ತೀಚಿನ ಘಟನೆಗಳನ್ನು ನೋಡಿದಾಗ ಪೊಲೀಸ್ ಇಲಾಖೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಆಗುತ್ತಿದೆ. ಪೊಲೀಸರು ಅವರಾಗಿಯೇ ಕಾನೂನು ಮುರಿಯುವುದಿಲ್ಲ, ಹಿಂದಿನಿಂದ ರಾಜಕಾರಣಿಗಳು ಆ ಕೆಲಸಕ್ಕೆ ಹಚ್ಚುತ್ತಾರೆ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡದೆ ಇರೋದೆ ಇಂತಹ ಘಟನೆಗಳ ಕಾರಣ‌. ಸಮಾಜ ಘಾತುಕ ಶಕ್ತಿಗಳಿಗೆ ಎಲ್ಲಿ ಇರುತ್ತದೆ ಎಂಬುದು ಪೊಲೀಸರಿಗೆ ಗೊತ್ತು ಇರುತ್ತದೆ. ಪೊಲೀಸರು ಮನಸ್ಸು ಮಾಡಿದ್ರೆ ಹತ್ತು ನಿಮಿಷದಲ್ಲಿ ತಪ್ಪು ಮಾಡಿದವರನ್ನ ಬಂಧಿಸುತ್ತಾರೆಂದು ಗೃಹ ಸಚಿವರ ಎದುರೇ ಸಿ.ಟಿ.ರವಿ ಪ್ರಕರಣವನ್ನು ಪರೋಕ್ಷವಾಗಿ ಶಾಸಕ ಮಹೇಶ ಟೆಂಗಿನಕಾಯಿ ಕುಟುಗಿದರು.

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಗಲಭೆಯನ್ನು ಉಲ್ಲೇಖಿಸಿದ ಟೆಂಗಿನಕಾಯಿ, 'ಹೋರಾಟಗಾರರ ಮೇಲಿನ ಪ್ರಕರಣವನ್ನು ಹಿಂಪಡೆಯಲು ನಮ್ಮದೇನು ಅಭ್ಯಂತರ ಇಲ್ಲ. ಪೊಲೀಸರ ಮೇಲೆ ಹಲ್ಲೆ ಮಾಡಿದವರ ಮೇಲೆ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ಪ್ರಕರಣವನ್ನ ಹಿಂಪಡದಿದ್ದು ಖೇದಕರ. ಪೊಲೀಸರ ನೈತಿಕತೆ ಇಂತಹ ಘಟನೆಗಳಿಂದ ಕುಗ್ಗುತ್ತದೆ. ಮತ್ತೊಮ್ಮೆ ಈ ನಿರ್ಧಾರವನ್ನ ಪರಿಶೀಲಿಸಬೇಕೆಂದು ಆಗ್ರಹಿಸಿದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/12/2024 05:53 pm

Cinque Terre

136.54 K

Cinque Terre

8

ಸಂಬಂಧಿತ ಸುದ್ದಿ