ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗೃಹ ಸಚಿವರಿಗೆ ಸೆಲ್ಯೂಟ್ ಮಾಡಿ ಸ್ವಾಗತಿಸಿದ ಸಚಿವ ಸಂತೋಷ ಲಾಡ್

ಹುಬ್ಬಳ್ಳಿ: ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಪೊಲೀಸ್‌ ಶೈಲಿಯ ಸೆಲ್ಯೂಟ್ ಮಾಡಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್ ಅವರ ನಡೆ ಅಲ್ಲಿದ್ದವರನ್ನೆಲ್ಲ ನಗೆಗಡಲಲ್ಲಿ ತೇಲಿಸಿದ ಸ್ವಾರಸ್ಯಕರ ಪ್ರಸಂಗ ನಡೆಯಿತು.

ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಇಂದು ನಿಗದಿಯಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ಆಗಮಿಸಿದ್ದ ಸಚಿವ ಲಾಡ್‌ ಅವರು ಖಾಸಗಿ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಅಲ್ಲಿಗೆ ಡಾ. ಪರಮೇಶ್ವರ್‌ ಅವರು ಆಗಮಿಸಿದರು. ಆಗ ಸಚಿವ ಲಾಡ್‌ ಅವರು ಪೊಲೀಸ್ ಸ್ಟೈಲ್‌ನಲ್ಲಿ ಸೆಲ್ಯೂಟ್ ಮಾಡಿ ಗೃಹ ಸಚಿವರಿಗೆ ಸ್ವಾಗತ ಕೋರಿದರು. ನಂತರ ಇಬ್ಬರೂ ಸಚಿವರು ಒಂದಷ್ಟು ಕಾಲ ಚರ್ಚೆ ನಡೆಸಿದರು.

ದೈಹಿಕ ಕಸರತ್ತು, ಶಿಸ್ತು, ಸಮಯ ಪಾಲನೆಯಲ್ಲಿ ತಮ್ಮದೇ ವಿಶೇಷತೆ ಕಾಪಾಡಿ ಗಮನಸೆಳೆಯುವ ಸಚಿವ ಲಾಡ್‌ ಅವರ ಪೊಲೀಸ್ ಸ್ಟೈಲ್‌ ಸೆಲ್ಯೂಟ್ ಸ್ಥಳದಲ್ಲಿದ್ದವರಿಗೆ ಅಚ್ಚರಿ ಮೂಡಿಸಿತು.

Edited By : Vijay Kumar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/12/2024 10:22 pm

Cinque Terre

67.35 K

Cinque Terre

8

ಸಂಬಂಧಿತ ಸುದ್ದಿ