ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ರೀತಿಯಲ್ಲೆ ರೈತರ ಮೇಲಿನ ಕೇಸ್ ವಾಪಸ್" : ಗೃಹ ಸಚಿವ ಪರಮೇಶ್ವರ್

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ರೀತಿಯಲ್ಲಿ ರೈತರ ಮೇಲಿನ ಕೇಸ್ ವಾಪಸ್ ಪಡೆಯಲು ಚಿಂತನೆ ನಡೆಸುತ್ತೇವೆ. ಹಳೇ ಹುಬ್ಬಳ್ಳಿ ಪ್ರಕರಣದಲ್ಲಿ 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಎರಡು ವರ್ಷ ಅವರು ಜೈಲಿನಲ್ಲಿದ್ದರು. ಪ್ರಕರಣ ರದ್ದು ಮಾಡುವಂತೆ ಸತತ ಮನವಿಗಳು ಬಂದಿದ್ದವು. ನಂತರ ಸಂಪುಟದಲ್ಲಿಟ್ಟು ಕೇಸ್ ವಾಪಸ್ ಪಡೆದಿದ್ದೇವೆ. ಅದೇ ರೀತಿ ರೈತರ ಮೇಲೆ ಹಾಕಿರೋ ಕೇಸ್ ವಾಪಸ್ ಪಡೆಯಬೇಕೆಂದು ಆಗ್ರಹಿಸಲಾಗಿದೆ.

ಈ ವಿಚಾರವನ್ನು ಸಂಪುಟದಲ್ಲಿಟ್ಟು ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.

ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ಬೆಸ್ಟ್, ಇಡೀ ದೇಶದಲ್ಲಿ ಮೂರು ಬಾರಿ ಯಾರೂ ಗೃಹ ಸಚಿವರಾಗಿಲ್ಲ, ಅದು ನನ್ನ ಅದೃಷ್ಟ, ಎರಡು ವರ್ಷಗಳಿಂದ ಎಲ್ಲೂ ಕಾನೂನಿನ ವೈಫಲ್ಯ ಕಂಡುಬಂದಿಲ್ಲ, ಕರಾವಳಿ ಭಾಗದಲ್ಲಿ ಕೋಮು ಗಲಭೆಗಳು ಆಗಿಲ್ಲ. ಪೊಲೀಸ್ ಇಲಾಖೆ ಆಧುನಿಕತೆ ಆಗಿದೆ.

ಘಟನೆ ನಡೆದ 48 ತಾಸುಗಳಲ್ಲಿ ಆರೋಪಿ ಬಂಧಿಸಿದ್ದಾರೆ. ಸುವರ್ಣ ಸೌಧದಲ್ಲಿ ಒಮ್ಮೆಲೆ 10 ಸಾವಿರ ಜನ ನುಗ್ಗಿದರೆ ಪೊಲೀಸರು ಏನು ಮಾಡಬೇಕು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ನಾವು ಲಾಠಿ ಪ್ರಹಾರ ಮಾಡಿದ್ದೇವೆಂದು ಬೆಳಗಾವಿ ಲಾಟಿ ಪ್ರಹಾರವನ್ನು ಪರಮೇಶ್ವರ್ ಸಮರ್ಥಿಸಿಕೊಂಡರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/12/2024 05:38 pm

Cinque Terre

41.5 K

Cinque Terre

0

ಸಂಬಂಧಿತ ಸುದ್ದಿ