ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸರ್ಕಾರಿ ಶಾಲೆ ಮಕ್ಕಳ ಜೊತೆ ಬೆರೆತು ಚಟಪಟ ಮಗ್ಗಿ ಕೇಳಿದ ಉಪವಿಭಾಗಾಧಿಕಾರಿ ಶಾಲಂ ಹುಸೇನ್

ಕುಂದಗೋಳ : ಸರ್ಕಾರಿ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಅವರು ಮಕ್ಕಳ ಶೈಕ್ಷಣಿಕ ಪ್ರಗತಿ ಶಾಲೆ ಅಭಿವೃದ್ಧಿ ಗಮನಿಸಿ ಬೇಷ್ ಎಂದಿದ್ದಾರೆ.

ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಡನೆ ಬೆರೆತು ಮಗ್ಗಿ, ರಾಜ್ಯ, ರಾಜ್ಯದ ರಾಜಧಾನಿ ಸೇರಿದಂತೆ ಹಲವು ಪ್ರಶ್ನೆ ಕೇಳಿದ್ದಾರೆ. ಬಳಿಕ ಶಾಲೆ ಚಿಗರಿ ಬಸ್ ಬಣ್ಣ, ಶಾಲೆ ಕೊಠಡಿಯಲ್ಲಿ ಬರೆಸಲಾದ ಶೈಕ್ಷಣಿಕ ಬರಹ, ಕಲಿಕಾ ಕೌಶಲ್ಯದ ಬೋರ್ಡ್'ಗಳನ್ನು ನೋಡಿ ಶಿಕ್ಷಕರಿಗೆ ಪ್ರೋತ್ಸಾಹ ತುಂಬಿದರು.

ಮುಖ್ಯವಾಗಿ ಮಕ್ಕಳು ತಮ್ಮ ಶಾಲೆಗೆ ಜಿಲ್ಲಾ ಉಪವಿಭಾಗಾಧಿಕಾರಿಗಳು ಬಂದಿದ್ದಾರೆ ಎಂಬ ಖುಷಿಯಲ್ಲಿ ಅತಿ ಸ್ವೀಕರಿಸಿ ಚಟಪಟ ಚಟಪಟ ಮಾತುಗಳನ್ನು ಆಡಿ ತಮ್ಮ ಪಠ್ಯ, ಪಠ್ಯೇತರ ಚಟುವಟಿಕೆಗಳ ವಿವರ ತಿಳಿಸಿದ್ದಾರೆ.

ಒಟ್ಟಾರೆ ಸರ್ಕಾರಿ ಶಾಲೆ ಉಪ ವಿಭಾಗಾಧಿಕಾರಿಗಳ ಭೇಟಿಯಿಂದ ಮತ್ತಷ್ಟೂ ಅಭಿವೃದ್ಧಿಯತ್ತ ಭರವಸೆ ಹೊಂದಿ ಶೈಕ್ಷಣಿಕ ಅಭಿವೃದ್ಧಿ ಅಹವಾಲನ್ನು ನೀಡಿದ್ದಾರೆ.

Edited By : Vinayak Patil
Kshetra Samachara

Kshetra Samachara

25/12/2024 04:57 pm

Cinque Terre

51.58 K

Cinque Terre

0

ಸಂಬಂಧಿತ ಸುದ್ದಿ