ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಣಿಯಾದ ಹುಬ್ಬಳ್ಳಿ ಟೆಂಡರ್ ಶೋ ರೋಡ್ ಪುಟ್‌ಪಾತ್ : ಕಣ್ಮುಚ್ಚಿ ಕುಳಿತ ಪಾಲಿಕೆ ಅಧಿಕಾರಿಗಳು

ಹುಬ್ಬಳ್ಳಿ : ನಮ್ ಹುಬ್ಳಿದಾಗ ಮೊಟ್ಟ ಮೊದಲ ಮಸ್ತಾಗಿ ರಸ್ತೆ ಆಗಿದ್ದು, ಅದು ವಿದ್ಯಾನಗರ ಟೆಂಡರ್ ಶೋ ರೋಡ್. ಆದ್ರ ಅಲ್ಲೇ ಇದ್ದ ಪುಟ್‌ಪಾತೇ ಕಾಣಿ ಆಗೈತಿ ನೋಡ್ರಿ.. ಅಂದ್ರ ಕಳದಿಲ್ಲಾ ಕಾಣಲಾರದಂಗ್ ಮಾಡ್ಯಾರ ನೋಡ್ರಿ ಈ ಕಮರ್ಷಿಯಲ್ ಬಿಲ್ಡಿಂಗ್ ಮಾಲೀಕ್ರ...

ನೋಡಿದ್ರಲ್ಲಾ.... ಪುಟ್‌ಪಾತ್ ಮ್ಯಾಗ್ ಹೆಂಗೆಂಗ್ ಕಡಿ, ಕಬ್ಬಿಣ, ಉಸುಕು, ಮಣ್ಣು ಹಾಕಿದ್ದಾರಂತ... ಹಿಂಗ್ ಇದ್ದ ಪುಟ್‌ಪಾತ್‌ನ ಅತಿಕ್ರಮಣ ಮಾಡ್ಕೊಂಡ್ರ ಪಾಪ ಪಾದಾಚಾರಿಗಳು ಹೆಂಗ್ ಓಡಾಡಬೇಕು ಹೇಳ್ರಿ ನೀವ... ಇದು ಟೆಂಡರ್ ಶೋ ರೋಡ್ ಎಲ್ಲಿಂದ ಸ್ಟಾರ್ಟ್ ಆಗುತ್ತ... ಅಲ್ಲಿಂದ ಎಲ್ಲೆಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ಕಟ್ಟಾತರ ಅಲ್ಲೆಲ್ಲಿ ಹಿಂಗ್ ಇಟ್ಟಂಗಿ, ಕಡಿ, ಕಬ್ಬಣ, ಉಸುಗು ಹಾಕಿ ರಾಜಾರೋಷವಾಗಿ ಬಿಲ್ಡಿಂಗ್ ಕಟ್ಟಾತರ.... ನಿಮ್ ಪಬ್ಲಿಕ್ ನೆಕ್ಸ್ಟ್ ದಾಗ ಈ ಹಿಂದೇನೂ ಇದೇ ಬಿಲ್ಡಿಂಗ್ ಮಾಲೀಕರು ಮಾಡಿದ ಎಡವಟ್ಟಿನ ಬಗ್ಗೆ ಸುದ್ದಿ ಮಾಡಿದ್ವಿ... ಆಗ ಪಾಲಿಕೆ ಆಯುಕ್ತರು ಖಡಕ್ ವಾರ್ನಿಂಗ್ ಮಾಡಿ, ಅದನ್ನ ತೆರವು ಮಾಡ್ಸಿದ್ರು... ಈಗ ಮತ್ ಅದಕ್ಕಿಂತ ಹೆಚ್ ವಸ್ತುಗಳನ್ನ ಪುಟ್‌ಪಾತ್ ಮ್ಯಾಗ ಹಾಕ್ಯಾರ...

ಇದು ಮಹಾನಗರ ಪಾಲಿಕೆಯ ಜುನಲ್ 5 ವಲಯ ಕಚೇರಿ ವ್ಯಾಪ್ತಿಯಲ್ಲಿ ಬರುತ್ತ. ಅಲ್ಲಿ ಅಧಿಕಾರಿಗಳಿಗೆ ಈ ಪುಟ್‌ಪಾತ್ ಅತಿಕ್ರಮಣ ಮಾಡ್ಕೊಂಡಿದ್ದು ಗೊತ್ತಿರೋ ವಿಚಾರ.. ಯಾಕ ಅವರು ಸುಮ್ಮನ ಇದಾರ ಅಂತ ಗೊತ್ತಿಲ್ಲಾ... ಅದಕ್ಕೂ ಬ್ಯಾರೆ ಕಾರಣನೂ ಇರಬಹುದು. ಇದರಿಂದ ಪಾದಾಚಾರಿಗಳಗೆ ಬಾಳ ಅಂದ್ರ ಬಾಳ ಕಷ್ಟ ಪಡಾತರ.. ಪುಟ್‌ಪಾತ್ ಇರ್ಲಾರ್ದಕ್ ರಸ್ತೆ ಮೇಲೆ ಹೊಂಟಾರ್.. ಈಗಲಾದ್ರು ಪಾಲಿಕೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕ್ತಾರಾ ಎಂಬುದನ್ನ ಕಾಯ್ದು ನೋಡಬೇಕು..

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/12/2024 06:11 pm

Cinque Terre

29.95 K

Cinque Terre

10

ಸಂಬಂಧಿತ ಸುದ್ದಿ