ಹುಬ್ಬಳ್ಳಿ: ನೂತನವಾದ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯನ್ನು ಗೃಹ ಸಚಿವ ಜಿ. ಪರಮೇಶ್ವರ್ ಅವರು ಉದ್ಘಾಟನೆ ಮಾಡಿದರು.
ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಹೋಮ್ ಮಿನಿಸ್ಟರ್ ಮತ್ತು ಸಭಾಪತಿ ಹೊರಟ್ಟಿ ಅವರು, ನೂತನ ಪೊಲೀಸ್ ಠಾಣೆ ಉದ್ಘಾಟನೆ ಮಾಡಿದರು. ಸಚಿವ ಸಂತೋಷ್ ಲಾಡ್, ಪ್ರಸಾದ್ ಅಬ್ಬಯ್ಯ, ಶಾಸಕ ಮಹೇಶ ಟೆಂಗಿನಕಾಯಿ, ಎನ್ ಹೆಚ್ ಕೋನರೆಡ್ಡಿ, ಸೇರಿದಂತೆ ಹಲವಾರು ಗಣ್ಯರು ಸಾಥ್ ನೀಡಿದರು. ಎಲ್ಲ ಗಣ್ಯರನ್ನು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಸ್ವಾಗತ ಮಾಡಿಕೊಂಡರು. ಸಸಿಗೆ ನೀರು ಹಾಕುವುದರ ಮೂಲಕ ಪೊಲೀಸ್ ಠಾಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Kshetra Samachara
24/12/2024 03:52 pm