ಯುಪಿ : ಅಬ್ಬಾ.. ಈ ವಿಡಿಯೋವನ್ನು ಒಂದು ಕ್ಷಣ ಎದೆಗಟ್ಟಿಮಾಡಿಕೊಂಡು ನೋಡಬೇಕು ಅಂತಹ ಅಮಾನುಷ ಘಟನೆಯೊಂದು ಉತ್ತರಪ್ರದೇಶದ ಆಗ್ರಾ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ.
ಅಪಘಾತವಾಗಿ ಟ್ರಕ್‌ನ ಅಡಿಯಲ್ಲಿ ದ್ವಿಚಕ್ರ ವಾಹನ ಮತ್ತು ಇಬ್ಬರು ಸವಾರರು ಸಿಲುಕಿದ್ದರೂ ಅದನ್ನು ಲೆಕ್ಕಿಸದೆ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಎಳೆದೊಯ್ದು ಟ್ರಕ್ ಚಾಲಕನೋರ್ವ ದುಷ್ಕೃತ್ಯ ಮೆರೆದಿದ್ದಾನೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಿಜಕ್ಕೂ ಭಯಾನಕವಾಗಿದೆ.
ಪ್ರಕಾಶ್ ನಗರದ ನಿವಾಸಿಯಾಗಿರುವ ಝಾಕಿರ್ ಹಾಗೂ ಆತನ ಗೆಳೆಯ ತನ್ನ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಮುಖ್ಯ ರಸ್ತೆಯ ಡಿವೈಡರ್ ಬಳಿ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಈ ವೇಳೆ ಎದುರುಗಡೆ ಬಂದ ಟ್ರಕ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಟ್ರಕ್‌ನ ಅಡಿಭಾಗದಲ್ಲಿ ಸಿಲುಕಿದ್ದಾರೆ, ಇದು ಗೊತ್ತಿದ್ದರೂ ಟ್ರಕ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗುತ್ತಿದ್ದಾನೆ.
ಆಗ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಲಾರಿಯನ್ನು ನಿಲ್ಲಿಸಲು ಹೇಳಿದರೂ ಲೆಕ್ಕಿಸಲಿಲ್ಲ, ಬಳಿಕ ಸುಮಾರು 1ಕಿ.ಮೀ ಬಳಿಕ ಸಿಗ್ನಲ್ ಸಿಕ್ಕಿದೆ. ಈ ವೇಳೆ ಲಾರಿ ಚಾಲಕ ನಿಲ್ಲಿಸಿದ್ದಾನೆ. ಕೂಡಲೇ ಇತರ ವಾಹನ ಸವಾರರು ಲಾರಿಯಡಿ ಸಿಲುಕಿದ್ದ ಬೈಕ್ ಸವಾರರನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಲಾರಿ ಚಾಲಕನಿಗೆ ಮನಸ್ಸೋ ಇಚ್ಛೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗ್ತಿದೆ.
PublicNext
24/12/2024 05:14 pm