ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ಯುವಕನೊಬ್ಬ ಹುಚ್ಚು ಸಾಹಸಕ್ಕೆ ಕೈ ಹಾಕಿದ, ಪರಿಣಾಮ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಹೌದು ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಯುವಕನೊಬ್ಬ ಸ್ಟಂಟ್ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ. ಸ್ಟಂಟ್ ಮಾಡುವಾಗ ಆತನ ಕತ್ತಿನ ಮೂಳೆ ಮುರಿದಿದ್ದು ಪ್ರಾಣ ಕಳಿದುಕೊಂಡಿದ್ದಾನೆ.
ಹೌದು ಡಿಸೆಂಬರ್ 13 ರಂದು ಮಧ್ಯಪ್ರದೇಶದ ನೀಮುಚ್‌ನಲ್ಲಿ 18 ವರ್ಷದ ಯುವಕ ತನ್ನ ಸ್ನೇಹಿತರ ಮುಂದೆ ಪಲ್ಟಿ ಮಾಡಲು ಪ್ರಯತ್ನಿಸುತ್ತಿದ್ದಾಗ ತೀವ್ರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಜೀವನೋಪಾಯಕ್ಕಾಗಿ ಮಹಾರಾಷ್ಟ್ರದಲ್ಲಿ ಕಂಬಳಿಗಳನ್ನು ಮಾರುತ್ತಿದ್ದ ಯುವಕ ತನ್ನ ಮನೆಯ ಹೊರಗೆ ಸ್ಟಂಟ್ ಅಭ್ಯಾಸ ಮಾಡುತ್ತಿದ್ದಾಗ, ಅವನು ಮೊದಲು ನೆಲಕ್ಕೆ ಬಿದ್ದಾಗ ಕುತ್ತಿಗೆಯನ್ನು ಮುರಿದುಕೊಂಡಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.
ವಿಡಿಯೋದಲ್ಲಿ ಗಮನಿಸುವಂತೆ ಯುವಕ ನೆಲದ ಮೇಲೆ ಹಾಕಲಾದ ಕಂಬಳಿಗಳ ಮೇಲೆ ಪಲ್ಟಿ ಹೊಡೆಯುತ್ತಾನೆ. ಆದಾಗ್ಯೂ, ಒಂದು ಪ್ರಯತ್ನದ ಸಮಯದಲ್ಲಿ, ಅವನು ತಪ್ಪಾಗಿ ಅವನ ತಲೆಯ ಮೇಲೆ ಬಿದ್ದಿದ್ದಾನೆ. ಆಗ ಆತ ಪ್ರಜ್ಞೆ ಕಳೆದುಕೊಂಡಿದ್ದಾನೆ ಅದನ್ನು ಗಮನಿಸಿದ ಅಲ್ಲಿದ್ದವರು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಆರು ದಿನ ವೈದ್ಯಕೀಯ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
PublicNext
23/12/2024 02:01 pm