ಮುಂಬೈ: ಬುದ್ಧಿ ಹೇಳುವ ಪೊಲೀಸರೇ ಸಂಚಾರಿ ನಿಯಮವನ್ನು ಗಾಳಿಗೆ ತೂರಿ ಸ್ಕೂಟಿಯಲ್ಲಿ ಹೆಲ್ಮೆಟ್ ಇಲ್ಲದೆ, ಟ್ರಿಪಲ್ ರೈಡಿಂಗ್ ಹೋಗಿದ್ದಾರೆ. ಈ ವೇಳೆ ಹಿಂದೆ ಬರುತ್ತಿದ್ದ ವ್ಯಕ್ತಿಯೊಬ್ಬರು ಸಮವಸ್ತ್ರ ಧರಿಸಿ ಸ್ಕೂಟಿ ಮೇಲೆ ಕುಳಿತಿದ್ದ ಪೊಲೀಸ್ ಫೋಟೋವನ್ನು ಸೆರೆಹಿಡಿದು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಾಹನದ ನಂಬರ್ ಪ್ಲೇಟ್ ಅನ್ನು ಫೋಟೋ ಸೆರೆಹಿಡಿದಿದೆ. ಅದರಲ್ಲಿ "MH47 AE5165" ಎಂದು ಬರೆಯಲಾಗಿದೆ.
ಪ್ರಸಾದ್ ಎಂಬ ಬಳಕೆದಾರರು ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಫೋಟೋವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. "ಹೆಲ್ಮೆಟ್ ಇಲ್ಲ, ಟ್ರಿಪಲ್ ಸೀಟ್ ರೈಡ್, ಆಕ್ಟಿವಾದಲ್ಲಿ ಪೊಲೀಸ್ ಇದ್ದಾರೆ ನೋಡಿ. ಇವರಿಗೆ ದಂಡ ಅಥವಾ ಶುಲ್ಕ ಏನು? ಇದು ಪೊಲೀಸರಿಗೆ ಮಾತ್ರ ಕಾನೂನುಬದ್ಧವಾಗಿದೆಯೇ?" ಎಂದು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
PublicNext
23/12/2024 07:36 am