ಬಸ್, ರೈಲು ಪ್ರವಾಸ ಮಾಡುವಾಗ ಜಾಗೃತರಾಗಿ ಯಾಕಂದ್ರೆ ನಮ್ಮ ಸಹಪ್ರಯಾಣಿಕರಂತೆ ಬಂದು ನಿಮ್ಮ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಬಹುದು. ಸದ್ಯ ವೈರಲ್ ಆದ ವಿಡಿಯೋವೊಂದರಲ್ಲಿ ಬಸ್ ಟ್ರ್ಯಾವೆಲ್ ಓಡುವಾಗ ಕಳ್ಳನೊಬ್ಬ ಸ್ಟಾಪ್ ಮಾಡಿದ ಬಸ್ ಏರಿ ಬಸ್‌ನಲ್ಲಿದ್ದ ಲ್ಯಾಪ್‌ಟಾಪ್ ಬ್ಯಾಗ್ ಕದ್ದು ಪರಾರಿಯಾಗಿದ್ದಾನೆ. ಸದ್ಯ ಆ ವಿಡಿಯೋ ಬಸ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನೂ ಬೆಂಗಳೂರು-ಕೊಯಮತ್ತೂರಿನ ಬಸ್ನಲ್ಲಿ ಈ ಘಟನೆ ನಡೆದಿದೆ. ಕೃಷ್ಣಗಿರಿಯ ಬಳಿ ಬಸ್ಸು ನಿಲ್ಲಿಸಿದಾಗ, ಪ್ರಯಾಣಿಕರು ಲ್ಯಾಪ್‌ಟಾಪ್ ಇರುವ ಬ್ಯಾಗ್ ಅನ್ನು ಬಸ್ಸಿನಲ್ಲಿಯೇ ಬಿಟ್ಟು ಇಳಿದಿದ್ದಾರೆ.
ಇದನ್ನೇ ಕಾಯುತ್ತಿದ್ದ ಕಳ್ಳನೊಬ್ಬ ಬಸ್ ಏರಿ, ಹಲವು ಸೀಟುಗಳನ್ನು ತಡಕಾಡಿದ್ದಾನೆ. ಎಲ್ಲೆಲ್ಲಿ ಬ್ಯಾಗ್ಗಳಿಗೆ ಅದನ್ನು ಎತ್ತಾಕಿಕೊಂಡು ಹೋಗಿದ್ದಾನೆ. ಅವೆಲ್ಲವೂ ಲ್ಯಾಪ್‌ಟಾಪ್ ಇರುವ ಬ್ಯಾಗ್ ಎನ್ನಲಾಗಿದೆ. ಟೋಪಿ ಧರಿಸಿ ಬಂದಿರುವ ಈತ ತನ್ನ ಗುರುತನ್ನು ಮರೆಮಾಚಲು ನೋಡಿದರೂ ಸಿಸಿಟಿವಿಯಲ್ಲಿ ಆತನ ಮುಖವನ್ನು ಕಾಣಬಹುದಾಗಿದೆ.
ಟ್ರ್ಯಾವೆಲ್ ಮಾಡುವಾಗ ರೆಸ್ಟ್ರೂಮ್ಗಳಿಗೆ, ಊಟಕ್ಕೆ ಹೋಗುವುದು ಅನಿವಾರ್ಯ ಆಗಿರುತ್ತದೆ. ಅಂಥ ಸಂದರ್ಭಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ಈ ವೈರಲ್ ವಿಡಿಯೋ ತೋರಿಸಿಕೊಟ್ಟಿದೆ.
ಹೀಗಿ ನೀವು ಪ್ರಯಾಣ ಮಾಡುವಾಗ ಕೆಳಗೆ ಇಳಿಯುವ ಅವಶ್ಯಕತೆ ಇದ್ರೆ ಕೆಳಗೆ ಇಳಿಯದ ಸಹಪ್ರಯಾಣಿಕರಿಗೆ ನಿಮ್ಮ ವಸ್ತುಗಳ ಜವಾಬ್ದಾರಿ ಕೊಡಿ ಇಲ್ಲವೇ ನಿಮ್ಮವರೇ ಒಬ್ಬರನ್ನು ನಿಮ್ಮ ವಸ್ತುಗಳನ್ನು ಕಾಯಲು ಬಿಟ್ಟು ಹೋಗಿ.
PublicNext
23/12/2024 05:27 pm