ಪಾಪ್‌ಕಾರ್ನ್ ಗೆ ಜಿಎಸ್‌ಟಿ ವಿಧಿಸುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಜೊತೆಗೆ ಜಿಎಸ್‌ಟಿ ಕೌನ್ಸಿಲ್ ನೀಡಿರುವ ಸ್ಪಷ್ಟನೆ ಬಗ್ಗೆ ಕೂಡಾ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. 55ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪಾಪ್‌ಕಾರ್ನ್ ಮೇಲೆ ಮೂರು ರೀತಿಯ ಜಿಎಸ್‌ಟಿ ಹಾಕಿರುವುದೇ ನಿರ್ಮಲಾ ಸೀತಾರಾಮನ್ ಅವರು ಟ್ರೋಲ್ ಆಗಲು ಕಾರಣವಾಗಿದೆ.
ಸಕ್ಕರೆ ಮಿಠಾಯಿ' ಎಂದು ವರ್ಗೀಕರಿಸಲಾದ ಕಾರಣ ಕ್ಯಾರಮೆಲೈಸ್ಟ್ ಪಾಪ್‌ಕಾರ್ನ್ ಅನ್ನು ಸಾಲೈಡ್ (ಉಪ್ಪು ಮಿಶ್ರಿತ) ಮತ್ತು ಸಾದಾ ಪಾಪ್‌ಕಾರ್ನ್‌ಗಿಂತ ವಿಭಿನ್ನವಾಗಿ ತೆರಿಗೆ ವಿಧಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಪ್ಯಾಕ್ ಮಾಡದ, ಲೇಬಲ್ ಇಲ್ಲದ ಸಾಲ್ವೆಡ್ ಪಾಪ್‌ಕಾರ್ನ್‌ಗೆ ಶೇಕಡ 5ರಷ್ಟು ಜಿಎಸ್‌ಟಿ, ಪ್ಯಾಕ್ ಮಾಡಲಾದ, ಲೇಬಲ್ ಮಾಡಿದ ಪಾಪ್‌ಕಾರ್ನ್‌ಗೆ ಶೇಕಡ 12ರಷ್ಟು ಜಿಎಸ್‌ಟಿ, ಕ್ಯಾರಮೆಲೈಸ್ಟ್ ಪಾಪ್‌ಕಾರ್ನ್‌ಗೆ ಶೇಕಡ 18ರಷ್ಟು ಜಿಎಸ್‌ಟಿ ಎಂದು ವಿವರಿಸಿದ ಬಳಿಕ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ.
ಟ್ರೋಲ್‌ಗಳು ಹೀಗಿವೆ ನೋಡಿ
ಹಲವು ನೆಟ್ಟಿಗರು ಪಾಪ್‌ಕಾರ್ನ್‌ಗೆ ವಿವಿಧ ರೀತಿಯ ಜಿಎಸ್‌ಟಿ ವಿಧಿಸಿರುವುದಕ್ಕೆ ಗೊಂದಲ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವೆಯ ಹೇಳಿಕೆ ಇನ್ನಷ್ಟು ಗೊಂದಲಕಾರಿಯಾಗಿದೆ ಎಂದು ಹೇಳಿದ್ದಾರೆ. "ಕ್ಯಾರಮೆಲೈಸ್ಟ್ ಸಾಲ್ವೆಡ್, ಚೀಸ್ - ಹೀಗೆ ಎಲ್ಲಾ ರೀತಿಯ ಪಾಪ್‌ಕಾರ್ನ್ ಅನ್ನು ನಾನು ಮಿಕ್ಸ್ ಮಾಡಿಕೊಂಡಿದ್ದೇನೆ. ಈಗ ಹೇಗೆ ಜಿಎಸ್‌ಟಿ ಹಾಕುತ್ತೀರಿ" ಎಂದು ಪ್ರಶ್ನಿಸುವ ಮೂಲಕ ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.
ಸಾಲ್ವೆಡ್ ಪಾಪ್‌ಕಾರ್ನ್‌ಗೆ ಶೇಕಡ 5ರಷ್ಟು ಜಿಎಸ್‌ಟಿ, ಕ್ಯಾರಮೆಲೈಸ್ಟ್ ಪಾಪ್‌ಕಾರ್ನ್‌ಗೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಸಿಹಿ ಇಷ್ಟ ಪಡುವ ಜನರಿಗೆ ನ್ಯಾಯ ಎಲ್ಲಿದೆ" ಎಂದು ಮತ್ತೋರ್ವ ನೆಟ್ಟಿಗರು ಪ್ರಶ್ನಿಸಿದ್ದಾರೆ. "ಶೀಘ್ರದಲ್ಲೇ ಪಾಪ್‌ಕಾರ್ನ್ ಜಿಎಸ್‌ಟಿಯನ್ನು ಇಎಂಐ ಮೂಲಕ ಪಾವತಿಸುವ ವ್ಯವಸ್ಥೆ ಬರಬಹುದು" ಎಂದಿದ್ದಾರೆ.
PublicNext
24/12/2024 02:13 pm