ಬೆಂಗಳೂರು : ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಮೇಲೆ ದುಷ್ಕರ್ಮಿಗಳು ಮೊಟ್ಟೆ ಎಸೆದಿರುವ ಘಟನೆ ನಡೆದಿದೆ. ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಲಕ್ಷ್ಮಿ ದೇವಿನಗರದ ವಾರ್ಡ್ ಬಿಜೆಪಿ ಕಚೇರಿ ಬಳಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಮುನಿರತ್ನಮೇಲೆ ಮೊಟ್ಟೆ ಎಸೆತ ನಡೆದಿದೆ.
ಶಾಸಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರೇ ಈ ಕೃತ್ಯ ಎಸಗಿದ್ದಾರೆ ಎಂದು ಮುನಿರತ್ನ ಬೆಂಬಲಿಗರು ಆರೋಪ ಮಾಡಿದ್ದಾರೆ. ಘಟನಾ ಸ್ಥಳದಿಂದ ಮುನಿರತ್ನ ತೆರಳಿದ ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಬಳಿಕ ರಾಜಕುಮಾರ್ ಸಮಾಧಿ ವೇಳೆ ಮೊಟ್ಟೆ ಎಸೆತ ಖಂಡಿಸಿ ಮುನಿರತ್ನ ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಜಾತಿನಿಂದನೆ ಕೇಸ್ ನಲ್ಲಿ ಮುನಿರತ್ನ ಜೈಲಿಗೆ ಹೋಗಿ ಬಂದಿದ್ರು.
PublicNext
25/12/2024 01:49 pm