ಗೋವಾ : ಗೋವಾದಲ್ಲಿ ಕಲಂಗುಟ್ ಬೀಜ್‌ನಲ್ಲಿ ಪ್ರವಾಸಿಗರ ದೋಣಿ ಮಗುಚಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 20 ಮಂದಿಯನ್ನು ರಕ್ಷಣೆ ಮಾಡಲಾಗಿದೆ, ಇನ್ನು 6 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಕಲಂಗುಟ್ ಬೀಜ್‌ನಲ್ಲಿ ಪ್ರವಾಸಿಗರ ದೋಣಿ ಮಗುಚಿದ್ದು, ಘಟನೆಯಲ್ಲಿ 13 ಜನರನ್ನು ರಕ್ಷಿಸಿದ್ದೇವೆ. ಆದರೆ ದೋಣಿಯ ಅಡಿಯಲ್ಲಿ ಸಿಲುಕಿದ್ದ ಒಂದೇ ಕುಟುಂಬದ ಸುಮಾರು ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ಲೈಪ್ ಗಾರ್ಡ್ ಉಸ್ತುವಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಎಷ್ಟು ಜನ? ಘಟನೆ ಕಾರಣವೇನು ಎಂಬುದರ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
PublicNext
25/12/2024 07:50 pm