ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿನಿಮೀಯ ಶೈಲಿಯಲ್ಲಿ ಬಚಾವ್

ಕೇರಳ: ಪವಾಡ ಸದೃಶ ರೀತಿಯಲ್ಲಿ ವ್ಯಕ್ತಿಯೋರ್ವ ಪಾರಾದ ಘಟನೆ ಕೇರಳದಲ್ಲಿ ನಡೆದಿದೆ. ದುರಂತ ತಪ್ಪಿಸಲು ಚಲಿಸುವ ರೈಲಿನ ಅಡಿಯಲ್ಲಿ ವ್ಯಕ್ತಿ ಮಲಗಿರುವುದು ಅನೇಕರ ಹುಬ್ಬೇರಿಸಿದೆ. ಕೇರಳದ ಕಣ್ಣೂರಿನ ಪನ್ನೆನ್‌ ಪಾರಾದಲ್ಲಿ ಘಟನೆ ನಡೆದಿದೆ. ರೈಲಿನ ಹಳಿಯ ಮೇಲೆ ನಡೆದುಕೊಂಡು ವ್ಯಕ್ತಿ ಹೋಗ್ತಿದ್ದ. ಈ ವೇಳೆ ಸಡನ್ ಆಗಿ ರೈಲು ಬಂದಿದ್ದರಿಂದ ವ್ಯಕ್ತಿ ಗೊಂದಲಕ್ಕೆ ಒಳಗಾಗುತ್ತಾನೆ. ರೈಲು ಸಮೀಪಿಸುತ್ತಿದ್ದಂತೆಯೇ ಹಳಿಗಳ ನಡುವೆ ಮಲಗಿ ಎಸ್ಕೇಪ್ ಆಗ್ತಾನೆ.

ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯ ನಿವಾಸಿ ಶ್ರೀಜಿತ್ ಮೊಬೈಲ್ ಫೋನ್‌ನಲ್ಲಿ ದೃಶ್ಯ ರೆಕಾರ್ಡ್ ಮಾಡಿ ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.

Edited By : Suman K
PublicNext

PublicNext

24/12/2024 04:33 pm

Cinque Terre

31.93 K

Cinque Terre

0