ನವದೆಹಲಿ: ಇತ್ತೀಚೆಗೆ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಗೊಂಡಿರುವ ಶಿಕ್ಷಣತಜ್ಞ, ಯುಪಿಎಸ್‌ಸಿ ತರಬೇತುದಾರ ಅವಧ್ ಓಜಾ ಅವರು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ದೇವರು ಎಂದಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಕೃಷ್ಣನ ಅವತಾರ ಎಂದು ಹೇಳಿದ್ದಾರೆ.
ಹೌದು. ನಾಗರಿಕ ಸೇವಾ ಪರೀಕ್ಷೆಯ (ಯುಪಿಎಸ್‌ಸಿ) ತರಬೇತುದಾರ ಹಾಗೂ ಸ್ಫೂರ್ತಿದಾಯಕ ಭಾಷಣಕಾರ ಅವಧ್ ಓಜಾ ಅವರು ಸೋಮವಾರ ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದರು. ಈ ಕಾರ್ಯಕ್ರಮದಲ್ಲಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಹಾಗೂ ಹಿರಿಯ ನಾಯಕ ಮನೀಷ್ ಸಿಸೋಡಿಯಾ ಇದ್ದರು.
'ಅರವಿಂದ್ ಕೇಜ್ರಿವಾಲ್ ಖಂಡಿತವಾಗಿಯೂ ದೇವರು. ಅವರು ಕೃಷ್ಣನ ಅವತಾರ ಎಂದು ನಾನು ಈಗಾಗಲೇ ಹೇಳಿದ್ದೇನೆ. ಯಾರಾದರೂ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸಿದಾಗ, ಅವರು ಬಡವರ ಪಾಲಿಗೆ ಮೆಸ್ಸಿಹ್ ಆಗಲು ಪ್ರಯತ್ನಿಸಿದಾಗ, ಸಮಾಜದ ಅನಿಷ್ಟಗಳು (ಕಾನ್ಸ್) ಅವನ ಹಿಂದೆ ಹೋಗುತ್ತವೆ' ಎಂದು ಅವಧ್ ಓಜಾ ತಿಳಿಸಿದರು.
PublicNext
24/12/2024 05:00 pm