ಜೈಸಲ್ಮೇರ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 55ನೇ ಸಭೆಯು, ವಿದ್ಯುತ್‌ಚಾಲಿತ ಹಳೆಯ ಕಾರುಗಳ ಮಾರಾಟದ ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ ಶೇ 18ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.
ಹೌದು ಹಳೆಯ ಮತ್ತು ಬಳಸಿದ ಎಲೆಕ್ಟ್ರಿಕ್ ವಾಹನಗಳು(ಇವಿಗಳು) ಮತ್ತು ಸಣ್ಣ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟದ ಮೇಲೆ ಶೇ. 18 ರಷ್ಟು ಜಿಎಸ್‌ಟಿ ವಿಧಿಸಲು ಸಭೆ ನಿರ್ಧರಿಸಿದೆ.
ಈ ವಿಚಾರದ ಬಗ್ಗೆ ಟ್ವಿಟ್ ಮಾಡಿದ ಕಾಂಗ್ರೆಸ್ ವಕ್ತಾರ ಪ್ರಶಾಂತ್ ಭೂಷಣ್
ನಿಮ್ಮ ಹಳೆಯ ಕಾರಿನ ಖರೀದಿ ಮತ್ತು ಮಾರಾಟದ ಬೆಲೆಯ ನಡುವಿನ ವ್ಯತ್ಯಾಸದ ಮೇಲೆ ಮಾತ್ರ ನಿಮಗೆ 18% GST ವಿಧಿಸಲಾಗುವುದು ಎಂದು ಸೀತಾರಾಮನ್ ಹೇಳುತ್ತಾರೆ. ಆದರೆ ನೀವು 10 ವರ್ಷಗಳ ಹಿಂದೆ 10 ಲಕ್ಷಕ್ಕೆ ನಿಮ್ಮ ಕಾರನ್ನು ಖರೀದಿಸಿ ಈಗ ಅದನ್ನು 1 ಲಕ್ಷಕ್ಕೆ ಮಾರಾಟ ಮಾಡಲು ನಿರ್ಧರಿಸಿದ್ದರೆ ನೀವು 9 ಲಕ್ಷದ ಮಾರ್ಜಿನ್‌ನಲ್ಲಿ ಮಾತ್ರ 18% ಜಿಎಸ್‌ಟಿ ಪಾವತಿಸಬೇಕಾಗುತ್ತದೆ.
ಹೀಗೆ ನೀವು 1 ಲಕ್ಷಕ್ಕೆ ಮಾರಾಟದ ಮೇಲೆ 1,62,000 GST ಪಾವತಿಸುತ್ತೀರಿ ಆಗ ನೀವು ಈ GST ಪಾವತಿಸಲು ನಿಮ್ಮ ಬಟ್ಟೆಗಳನ್ನು ಮಾರಾಟ ಮಾಡಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಸೀತಾರಾಮನ್ ಮೇಧಾವಿ! ಎಂದು ಲೇವಡಿ ಮಾಡಿದ್ದಾರೆ.
PublicNext
24/12/2024 02:41 pm