ಅಳ್ನಾವರ: ಅಳ್ನಾವರ ತಾಲೂಕಿನ ಕೋಗಿಲಗೇರಿ ಹಾಗೂ ಕಾಸೇನಟ್ಟಿ ಗ್ರಾಮಗಳಲ್ಲಿ ನಿನ್ನೆ ತಡ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಇಡೀ ತಾಲೂಕಿನ ಜನರೇ ಬೆಚ್ಚಿ ಬಿದ್ದಿದ್ದಾರೆ.
ಕಾಸೇನಟ್ಟಿ ಹಾಗೂ ಕೋಗಿಲಗೇರಿ ಗ್ರಾಮಗಳಲ್ಲಿ ನಿನ್ನೆ ರಾತ್ರಿ ಏಕಕಾಲಕ್ಕೆ ಕಳ್ಳತನ ನಡೆದದ್ದು,ಕೋಗಿಲಗೇರಿ ಗ್ರಾಮದ ನಿವಾಸಿ ಸಂಗಪ್ಪ ಮಲ್ಲಪ್ಪ ತೇಗೂರ ಎಂಬುವವರ ಮನೆಯಲ್ಲಿ ಮಧ್ಯ ರಾತ್ರಿ 1:30 ರ ಸುಮಾರಿಗೆ ಭಾರಿ ಪ್ರಮಾಣದ ಕಳ್ಳತನ ನಡೆದಿದೆ.115 ಗ್ರಾಂ ಬಂಗಾರ,120 ಗ್ರಾಂ ಬೆಳ್ಳಿ, 75,000 ಸಾವಿರ ರೂ. ಹಣವನ್ನ ದೋಚಿದ್ದಾರೆ. ಕೋಗಿಲಗೇರಿ ಎಲ್ಲಿಯೇ ನಿಂಗಪ್ಪ ಬಸಪ್ಪ ಅವರಾದಿ ಎಂಬುವವರ ಮನೆಯನ್ನ ಕಳ್ಳತನ ಮಾಡಿದ್ದು ಅಲ್ಲಿ ಯಾವುದೇ ವಸ್ತುಗಳು ಸಿಕ್ಕಿಲ್ಲ.
ಕಾಸೇನಟ್ಟಿ ಗ್ರಾಮದಲ್ಲಿ ಶಿವಾನಂದ ಜೊತೆಪ್ಪನವರ ಎಂಬುವವರ ಮನೆಯಲ್ಲಿ 1ಬಂಗಾರದ ತಾಳಿ ಸರ,1ಬಂಗಾರದ ಉಂಗುರ,1ಬೆಳ್ಳಿ ಉಂಗುರ ಕಳ್ಳರು ಎಗರಿಸಿದ್ದಾರೆ.ಇನ್ನೂ ಒಂದು ಮನೆಗೆ ಕನ್ನ ಹಾಕಿದ ಖದೀಮರಿಗೆ ಏನು ಸಿಕ್ಕಿಲ್ಲ.ಸ್ಥಳಕ್ಕೆ ಅಳ್ನಾವರ ಪೊಲೀಸ್ ಠಾಣೆ ಸಿಬ್ಬಂದಿ,ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸರಣಿ ಕಳ್ಳತನ ಪ್ರಕರಣದಿಂದಾಗಿ ತಾಲೂಕಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕಳ್ಳತನ,ದರೋಡೆಗಳು ಪದೇ ಪದೇ ನಡೆಯುತ್ತಿದ್ದು ಆರಕ್ಷಕರ ಮೇಲೆ ಜನತೆಗೆ ನಂಬಿಕೆ ಹೋದಂತಾಗಿದೆ.ಅಳ್ನಾವರ ಪಟ್ಟಣದ ಮಾನಕಾಪುರದಲ್ಲಿ ಮನೆ ಹಾಗೂ ಬೈಕ್ ಸರಣಿ ಕಳ್ಳತನ ನಡೆದ ನೆನಪು ಮಾಸುವ ಮುನ್ನವೇ ಈಗ ದೊಡ್ಡ ಪ್ರಮಾಣದ ಮತ್ತೊಂದು ಸರಣಿ ಕಳ್ಳತನ ನಡೆದದ್ದು ರಾಜ್ಯದ ಅತೀ ಸಣ್ಣ ತಾಲೂಕಿನ ಜನತೆಯನ್ನ ಬೆಚ್ಚಿ ಬೀಳಿಸಿದೆ.
ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ
Kshetra Samachara
24/12/2024 07:23 pm