ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಆಕ್ಸಫರ್ಡ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಾರ್ಟ್ ಫಿಲ್ಡ್ ಸ್ಪರ್ಧೆಗೆ ವಸಂತ ಹೊರಟ್ಟಿ, ಡಾ. ಶ್ರೀಧರ ದಂಡಪ್ಪನವರ, ಡಾ. ಮನಿಷ್ ಕೊಠಾರಿ, ಪ್ರೊ. ಮಂಜುನಾಥ ಮುತ್ತಲಗೇರಿ, ಪ್ರೊ. ಪ್ರಿಯಾಂಕಾ ರಿಚರ್ಡ್ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಆಕ್ಸಫರ್ಡ್ ಕಾಲೇಜಿನಲ್ಲಿ ಸಿನೆ ಅರೇನಾ-ಶಾರ್ಟ್ ಫಿಲ್ಡ್ ಸ್ಪರ್ಧೆಯನ್ನು ಇತ್ತೀಚೆಗೆ ಏರ್ಪಡಿಸಲಾಗಿದ್ದು, ಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಉದಯೋನ್ಮುಖ ಪ್ರತಿಭೆಗೆ ನೀರೆರೆದು ಪೋಷಿಸುವ ಉದ್ದೇಶದಿಂದ ನಟನೆ, ಚಿತ್ರಕತೆ ಬರೆಯುವುದು ಸೇರಿ ವಿವಿಧ ಕಲೆಗಳ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಹುಬ್ಬಳ್ಳಿ ಧಾರವಾಡದ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಚಲನಚಿತ್ರಗಳು ಸಮಾಜದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ. ಅದರಲ್ಲೂ ಕಿರು ಚಿತ್ರಗಳು ಹೆಚ್ಚಿನ ಪರಿಣಾಮ ಉಂಟು ಮಾಡುತ್ತವೆ ಎಂದರು.
ಆಕ್ಸಫರ್ಡ್ ಕಾಲೇಜಿನ ಚೇರ್ಮನ್ ವಸಂತ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಶ್ಮಿ ಎಸ್. ಎನ್., ಆರ್‌ಜೆ ಅಂಕಿತಾ, ಸುಶಾಂತ ಕುಲಕರ್ಣಿ, ಆರ್‌ಜೆ ಪ್ರತೀಕ, ಪ್ರಜ್ವಲ್ ನರೇಂದ್ರ ಅವರು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಎಂಬಿಎ ನಿರ್ದೇಶಕ ಡಾ. ಮನಿಷ್ ಕೊಠಾರಿ, ಬಿಸಿಎ ಪ್ರಾಚಾರ್ಯ ಪ್ರೊ. ಮಂಜುನಾಥ ಮುತ್ತಲಗೇರಿ, ಬಿಬಿಎ ವಿಭಾಗ ಮುಖ್ಯಸ್ಥೆ ಪ್ರೊ. ಪ್ರಿಯಾಂಕಾ ರಿಚರ್ಡ್, ಇತರರು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಕೆಎಲ್‌ಇ ಸಿಬಿಎ, ಗ್ಲೋಬಲ್ ಕಾಲೇಜ್, ಕೆಎಲ್‌ಇ ಬಿ.ಕಾಂ, ಜೆ.ಜಿ. ಪದವಿ ಕಾಲೇಜ್, ಸಂಸ್ಕಾರ ಸ್ಕೂಲ್, ಜೈನ್ ಕಾಮರ್ಸ್ ಕಾಲೇಜ್ ಸೇರಿ ವಿವಿಧ ಕಾಲೇಜುಗಳ ತಂಡಗಳು ಪಾಲ್ಗೊಂಡಿದ್ದವು. ಕಿರು ಚಿತ್ರ ಪ್ರಶಸ್ತಿಯನ್ನು ಕೆಎಲ್‌ಇ ಸಿಬಿಎ ತಂಡ (ಸೈನ್‌ಕಾಪಿ) ಪಡೆದುಕೊಂಡಿದೆ. ಇದೇ ರೀತಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಬೆಸ್ಟ್ ಆ್ಯಕ್ಟರ್, ಬೆಸ್ಟ್ ಡೈರೆಕ್ಟರ್, ಬೆಸ್ಟ್ ಎಡಿಟರ್, ಬೆಸ್ಟ್ ಸಿನೆಮಟೊಗ್ರಾಫರ್ ಮುಂತಾದ ಬಹುಮಾನಗಳನ್ನು ನೀಡಲಾಯಿತು.
Kshetra Samachara
23/12/2024 05:12 pm