ಕುಂದಗೋಳ: ಕಲುಷಿತಗೊಂಡ ಕೆರೆಯ ನೀರನ್ನು ಗ್ರಾಮಸ್ಥರಿಗೆ ಸೇವನೆ ಮಾಡದಂತೆ ಎಚ್ಚರಿಸಿ 24/7 ಶುದ್ಧ ಕುಡಿಯುವ ನೀರಿನ ಘಟಕ ಮತ್ತು ನಲ್ಲಿ ಸಂಪರ್ಕವನ್ನು ಪಶುಪತಿಹಾಳ ಗ್ರಾಮದ ಜನರಿಗೆ ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಒದಗಿಸಲಾಗಿದೆ.
ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಜನ ಸೇವಿಸುವ ಕೆರೆ ನೀರು ಕಲುಷಿತವಾಗಿತ್ತು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಗಮನ ಸೆಳೆದಿತ್ತು. ಪಬ್ಲಿಕ್ ನೆಕ್ಸ್ಟ್ ವರದಿಯ ಫಲ ಮತ್ತು ಗ್ರಾಮದ ಜನ ಹಿತದೃಷ್ಟಿಯಿಂದ ಇದೀಗ ತಾಲೂಕು ಪಂಚಾಯಿತಿ ಕಾರ್ಯ ಅಧಿಕಾರಿಗಳು ಪಶುಪತಿಹಾಳ ಗ್ರಾಮಕ್ಕೆ ಭೇಟಿ ನೀಡಿ ಕೆರೆ ನೀರಿನ ವ್ಯವಸ್ಥೆ ಪರಿಶೀಲನೆ ನಡೆಸಿ, ಕೆರೆ ನೀರನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆರೆ ಸುರಕ್ಷತೆ ಕ್ರಮ ಕೈಗೊಂಡು ಜನರಿಗೆ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದಾರೆ. ಒಟ್ಟಾರೆ ರೈತಾಪಿ ಜನರಿಗೆ ವರವಾಗಿದ್ದ ಕೆರೆ ನೀರನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
Kshetra Samachara
23/12/2024 03:16 pm