ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿನ ಕಮರಿಪೇಟೆ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ತಾತ್ಕಾಲಿಕ ಸ್ಥಳವನ್ನು ಸೂಚಿಸಲಾಗಿದೆ ಎಂದು ಪಾಲಿಕೆಯ ಅಧೀಕ್ಷಕ ಅಭಿಯಂತರರಾದ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.
ನಿನ್ನೆಯಷ್ಟೇ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಲ್ಲಿ ವರದಿಯಾಗಿರುವ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕಮರಿಪೇಟೆಯ ಸ್ಥಳಾಂತರಕ್ಕೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿ ತಾತ್ಕಾಲಿಕ ಸ್ಥಳಾಂತರಕ್ಕೆ ಸ್ಥಳವನ್ನು ಸೂಚಿಸಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಇದು ಪೊಲೀಸ್ ಇಲಾಖೆಯಿಂದಲೇ ಫೆಂಡಿಂಗ್ ಇದೆ ಎಂದರು.
ಪೊಲೀಸ್ ಇಲಾಖೆಯ ರಾಜ್ಯಮಟ್ಟದಿಂದ ಅಧಿಕೃತ ಆದೇಶ ಬಂದ ನಂತರವೇ ಪೊಲೀಸ್ ಅಧಿಕಾರಿಗಳು ಸ್ಟೇಷನ್ ಸ್ಥಳಾಂತರ ಮಾಡಲಿದ್ದಾರೆ. ಈಗಾಗಲೇ ಪಾಲಿಕೆಯಿಂದ ಕಟ್ಟಡದ ಸಾಮರ್ಥ್ಯವನ್ನು ಪರಿಶೀಲನೆ ಮಾಡಿ ಬೇರೆ ಕಡೆಗೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
Kshetra Samachara
22/12/2024 07:08 pm