ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಾಕಿ ಉಳಿದಿದೆ ಸಾವಿರಾರು ಕೋಟಿ ಬೆಳೆ ವಿಮೆ, ಲಕ್ಷಾಂತರ ರೈತ ಕುಟುಂಬಕ್ಕೀಗ ಸಂಕಷ್ಟ..!

ಹುಬ್ಬಳ್ಳಿ: ಬೆಳೆ ವಿಮೆ ಪಾವತಿಯಾಗದೇ ಧಾರವಾಡ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ರೈತರ ಅಕೌಂಟಿಗೆ ಸಂದಾಯವಾಗಬೇಕಿದೆ ಕೋಟಿ‌ ಕೋಟಿ ಬೆಳೆ ವಿಮೆ ಹಣ. ಆದರೆ ಇದುವರೆಗೂ ರೈತರಿಗೆ ಬೆಳೆವಿಮೆ ಹಣ ಜಮಾ ಆಗಿಲ್ಲ. ಅತಿವೃಷ್ಟಿಯಿಂದ ಕಂಗಾಲಾಗಿರುವ ಅನ್ನದಾತನಿಗೆ ಇದುವರೆಗೂ ಬೆಳೆವಿಮೆ ಜಮಾ ಆಗಿಲ್ಲ.

ಧಾರವಾಡ ಜಿಲ್ಲೆಯಲ್ಲಿಯೇ ರೈತರಿಂದ ಪಾವತಿ ‌ಮಾಡಲಾಗಿದೆ 158 ಕೋಟಿಗೂ ಅಧಿಕ ವಿಮೆ ಹಣ. ಧಾರವಾಡ ಜಿಲ್ಲೆಯ ಸುಮಾರು 1.30 ಲಕ್ಷಕ್ಕೂ ಅಧಿಕ ರೈತರಿಂದ ಪಾವತಿ ಮಾಡಲಾಗಿದೆ 158 ಕೋಟಿಗೂ ಅಧಿಕ ಹಣ. ಹೌದು.. ಸರ್ಕಾರ ಹಾಗೂ ಬೆಳೆ ವಿಮಾ ಕಂಪನಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬೀದಿಗೆ ಬಿದ್ದಿದೆ ಸಾವಿರಾರು ರೈತರ ಬದುಕು. ಒಂದೆಡೆ ಸಮರ್ಪಕ ಬೆಳೆ ಇಲ್ಲದೇ ಕಂಗೆಟ್ಟಿರೋ ಧಾರವಾಡ ಜಿಲ್ಲೆಯ ರೈತವರ್ಗ. ಮತ್ತೊಂದೆಡೆ ಬೆಳೆ ವಿಮೆ ಪರಿಹಾರಕ್ಕಾಗಿ ಕಟ್ಟಿರೋ ವಿಮೆ ಹಣವನ್ನೂ ಸಂದಾಯ ಮಾಡದೇ ಕಣ್ಣಾಮುಚ್ಚಾಲೆ ಆಟ. ಇದರಿಂದ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಸರ್ಕಾರ ಹಾಗೂ ವಿಮಾ ಕಂಪನಿಗಳಿಂದಾಗುತ್ತಿರುವ ಅನ್ಯಾಯದ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಎರಡು ವರ್ಷಗಳಿಂದಲೂ ಕೋಟಿ ಕೋಟಿ ಬೆಳೆ ವಿಮೆ ಸಂದಾಯ ಮಾಡದೇ ಬಾಕಿ ಉಳಿಸಿಕೊಂಡಿರೋ ಬೆಳೆ ವಿಮೆ ಕಂಪನಿ ಹಾಗೂ ಸರ್ಕಾರಗಳಿಂದ ಅನ್ನದಾತನಿಗೆ ಅನ್ಯಾಯವಾಗಿದೆ‌. ಜಿಲ್ಲೆಯಾದ್ಯಂತ ಬಹುತೇಕ ಬೆಳೆ ಹಾನಿಯಾದರೂ ರೈತರ ಕೈಗೆ ಒದಗುತ್ತಿಲ್ಲ ವಿಮಾ ಹಣ.

ಒಟ್ಟಿನಲ್ಲಿ ವಿಮೆ ಹಣವನ್ನು ಸಂದಾಯ ಮಾಡದೇ ರೈತರ ಜೀವ ಹಿಂಡುತ್ತಿವೆ ವಿಮಾ ಕಂಪನಿಗಳು. ಅವೈಜ್ಞಾನಿಕವಾಗಿ ವರದಿ ಮಾಡಿ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಲಾಗಿದೆ ಎಂಬ ಆರೋಪ ಗಂಭೀರವಾಗಿ ಕೇಳಿ ಬಂದಿದೆ. ಕೂಡಲೇ ಬೆಳೆ ವಿಮೆ ಹಣವನ್ನ ಬಿಡುಗಡೆ ಮಾಡಬೇಕಿದೆ ಸರ್ಕಾರ.

-ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

22/12/2024 02:26 pm

Cinque Terre

7.92 K

Cinque Terre

0

ಸಂಬಂಧಿತ ಸುದ್ದಿ