ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಯಿಂಟ್ ಡೆವಲ್ಪಮೆಂಟ್ ಹೆಸರಿನಲ್ಲಿ ವಂಚನೆ: ಹುಬ್ಬಳ್ಳಿ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲು

ಹುಬ್ಬಳ್ಳಿ: ಜಾಯಿಂಟ್ ಡೆವಲ್ಪಮೆಂಟ್ ಹೆಸರಿನಲ್ಲಿ ಮೂರು ಎಕರೆ ಜಮೀನನ್ನು ಸೇಲ್ ಡೀಲ್ ಮಾಡಿಸಿಕೊಂಡಿದಲ್ಲದೆ, 1 ಕೋಟಿ ಹಣಕ್ಕೆ 70 ಲಕ್ಷ ಬಡ್ಡಿ ಹಣ ಕಟ್ಟಿಸಿಕೊಂಡು, ಮರಳಿ ಹೊಲ ಕೇಳಿದರೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ 6 ಜನರ ವಿರುದ್ಧ ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಶ್ರೀಧರ್ ನರಗುಂದ ಎಂಬುವರಿಗೆ ಬೆದರಿಕೆ ಹಾಕಿ ವಂಚನೆ ಮಾಡಲಾಗಿದೆ. ನಗರದ ಸುಂದರಪಾಲ್ ಗೋಟಿಮುಕ್ಕಲಾ, ಚಂದ್ರಪಾಲ್ ಗೋಟಿಮುಕ್ಕಲಾ, ಫಿಲೋಮಿನ್ ಗೋಟಿಮುಕ್ಕಲಾ, ರಮೇಶ ಕೊಠಾರಿ, ಚೇತನ ಕೊಠಾರಿ, ಸಮೀರ್ ಚಾವೂಸ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶ್ರೀಧರ್ ಅವರ ಗೋಪನಕೊಪ್ಪದ 6 ಎಕರೆ ಹೊಲವನ್ನು ಜಾಯಿಂಟ್ ವೆಂಚರ್ ಕೊಡುತ್ತಿರಾ ಅದನ್ನು ಡೆವಲ್ಪಮೆಂಟ್ ಮಾಡಿ ನಿಮಗೆ ಅದರಲ್ಲಿ ಅರ್ಧ ಪ್ಲಾಟು ಕೊಡುತ್ತೇವೆ ಎಂದು ಹೇಳಿದ್ದಾರೆ.

ಎಕರೆಗೆ 30 ಲಕ್ಷದಂತೆ ಕೊಡುವುದಾಗಿ ಹೇಳಿದ್ದಾರೆ. ಶ್ರೀಧರ್ ಹಣದ ಅಡಚಣೆ ಇದ್ದಾಗ ಜಾಯಿಂಟ್ ವೆಂಚರ್ ಮೂಲಕ ಡೆವಲಪಮೆಂಟ್ ಮಾಡಲು ಒಪ್ಪಿಕೊಂಡಿದ್ದು, ನಂತರ 2020 ರಲ್ಲಿ 3 ಎಕರೆ ಹೊಲವನ್ನು ಸುಳ್ಳು ಹೇಳಿ ಮಾರಾಟ ಮಾಡಿದ ಬಗ್ಗೆ ಸೇಲ್ ಡೀಡ್ ಮಾಡಿಸಿಕೊಂಡಿದ್ದಾರೆ. ಅದಕ್ಕೆ 1 ಕೋಟಿ ಕೊಟ್ಟು, ಅದಕ್ಕೆ ಇಲ್ಲಿಯವರೆಗೆ 70 ಲಕ್ಷ ಬಡ್ಡಿ ಕೊಟ್ಟಿಸಿಕೊಂಡಿದ್ದಾರೆ. ಯಾವುದೇ ಡೆವಲಪಮೆಂಟ್ ಮಾಡಿಲ್ಲ. ಮರಳಿ ಹೊಲ ಕೇಳಲು ಹೋದರೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೇಶ್ವಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

22/12/2024 10:39 am

Cinque Terre

14 K

Cinque Terre

2

ಸಂಬಂಧಿತ ಸುದ್ದಿ