ಹುಬ್ಬಳ್ಳಿ: ಸಕಾಲಕ್ಕೆ ಔಷಧಿಗಳು ಸಿಗದೇ ಇರುವ ಕಾರಣಕ್ಕೆ ಸಾರ್ವಜನಿಕರು, ಔಷಧೀಯ ಉಗ್ರಾಣದ ಕೀಲಿಯನ್ನು ಮುರಿದು ಒಳನುಗ್ಗಿ ಔಷಧೀ ಪಡೆದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿನ್ನೆಯಷ್ಟೇ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ಬಂದಿದ್ದ ವೇಳೆಯಲ್ಲಿ ಔಷಧ ಸಿಗದೇ ಪರದಾಡುತ್ತಿದ್ದ ವೇಳೆಯಲ್ಲಿ ಲಾಕ್ ಮಾಡಿದ್ದ ಔಷಧೀಯ ಕೋಣೆಯ ಕೀಲಿ ಮುರಿದು ಚಿಕಿತ್ಸೆಗೆ ಔಷಧ ಪಡೆಯಲಾಗಿದೆ ಎನ್ನಲಾಗುತ್ತಿದೆ.
ಹೌದು.. ಒಂದಿಲ್ಲೊಂದು ಸಮಸ್ಯೆಗಳಿಂದ ಸುದ್ಧಿಯಾಗುತ್ತಲೇ ಇರುವ ಕೆಎಂಸಿಆರ್‌ಐನಲ್ಲಿ ರಾತ್ರಿಯ ವೇಳೆ ಔಷಧ ಲಭ್ಯವಾಗದೇ ಇರುವ ಕಾರಣಕ್ಕೆ ಸಾರ್ವಜನಿಕರು ಆಕ್ರೋಶಗೊಂಡು ಉಗ್ರಾಣದ ಕೀಲಿಯನ್ನು ಮುರಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೂ ಈ ಬಗ್ಗೆ ವೈದ್ಯಕೀಯ ಸಚಿವರು ಗಮನ ಹರಿಸುವ ಮೂಲಕ ತಡರಾತ್ರಿ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡಬೇಕಿದೆ. ಅಲ್ಲದೇ ರಾತ್ರಿ ವೇಳೆ ತುರ್ತು ನಿಗಾ ಘಟಕದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡುವ ಕಾರ್ಯವನ್ನು ಮಾಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/12/2024 06:39 pm