ಕುಂದಗೋಳ : ಕೂಡಲಸಂಗಮದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ಜನ್ಮದಿನ ನಿಮಿತ್ತ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಕುಂದಗೋಳ ಪಟ್ಟಣದ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ನೇತೃತ್ವದಲ್ಲಿ ಭಕ್ತಾದಿಗಳು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಕುಂದಗೋಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು.
ಬಳಿಕ ಮಾತನ್ನಾಡಿದ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರದ್ದು ತಾಯಿ ಹೃದಯ ಸದಾ ಮಾನವ ಕುಲದ ಏಳ್ಗೆ ಮತ್ತು ಮಾನವೀಯತೆಗೆ ಮಿಡಿಯುತ್ತದೆ, ಅವರ ಜನ್ಮದಿನದ ನಿಮಿತ್ತ ಈ ಕಾರ್ಯವನ್ನು ಭಕ್ತರು ಮಾಡಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಸರ್ವ ಧರ್ಮದ ಹಿರಿಯರು ಮುಖಂಡರು ಮತ್ತು ಸಮಾಜ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು ಬಾಂಧವರು ಉಪಸ್ಥಿತರಿದ್ದರು.
Kshetra Samachara
23/12/2024 05:16 pm