ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ | ಧಾರವಾಡ: ಟಿಟಿ ವಾಹನ, ಕ್ಯಾಂಟರ್ ಮಧ್ಯೆ ಡಿಕ್ಕಿ - ಮೂವರು ಸ್ಥಳದಲ್ಲೇ ಸಾವು

ಧಾರವಾಡ: ಟಿಟಿ ಹಾಗೂ ಕ್ಯಾಂಟರ್ ವಾಹನದ ಮಧ್ಯೆ ಅಪಘಾತ ಸಂಭವಿಸಿ ಕ್ಯಾಂಟರ್‌ನಲ್ಲಿದ್ದ ಮೂವರು ಸಾವಿಗೀಡಾದ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಸಮೀಪ ಸೋಮವಾರ ಬೆಳಗಿನಜಾವ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಶಿರಸಂಗಿಯವರಾದ ಹನುಮಂತ ಮಲ್ಲಾಡ (36), ಮಹಾಂತೇಶ ಚೌಹಾಣ (35) ಹಾಗೂ ಮಹಾದೇವಪ್ಪ ಹಾಲೊಳ್ಳಿ (35) ಎಂಬುವವರೇ ಈ ಅಪಘಾತದಲ್ಲಿ ಸಾವಿಗೀಡಾದವರು.

ಟಿಟಿ ವಾಹನ ಗೋವಾದಿಂದ ಚಿತ್ರದುರ್ಗದ ಕಡೆಗೆ ಹೊರಟಿತ್ತು. ಕ್ಯಾಂಟರ್ ವಾಹನ ಧಾರವಾಡ ಕಡೆಯಿಂದ ಗೋವಾ ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ರಸ್ತೆ ತಿರುವಿನಲ್ಲಿ ಮೊದಲು ಕ್ಯಾಂಟರ್ ವಾಹನ ಪಲ್ಟಿಯಾಗಿ ನಂತರ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಕ್ಯಾಂಟರ್‌ನಲ್ಲಿದ್ದ ಮೂವರು ಸಾವನ್ನಪ್ಪಿ, ಚಾಲಕ ಗಾಯಗೊಂಡಿದ್ದಾನೆ. ಟಿಟಿ ವಾಹನದಲ್ಲಿದ್ದವರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಳ್ನಾವರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/12/2024 10:45 am

Cinque Terre

121.05 K

Cinque Terre

2

ಸಂಬಂಧಿತ ಸುದ್ದಿ