ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವಳಿ ನಗರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡೋರು ವಿದ್ಯಾವಂತರೆ : ಕಮಿಷನರ್ ಶಶಿಕುಮಾರ್

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಬೆಳೆಯುತ್ತಿರೋ ನಗರ ಹೀಗಾಗಿ ಇಲ್ಲಿ ವಾಹನಗಳ ಸಂಖ್ಯೆ ಕೂಡಾ ತುಂಬಾ ಹೀಗಾಗಿ ಪ್ರತಿನಿತ್ಯ ಅಪಘಾತ ಸಂಭವಿಸಿ ವಾಹನ ಸವಾರರು ಕಳೆದು ಕೊಳ್ಳುತ್ತಿದ್ದಾರೆ. ಹೀಗಾಗಿ ವಾಹನ ಸವಾರರು ಸಂಚಾರಿ ನಿಯಮಗಳ ಬಗ್ಗೆ ಜಾಗ್ರತೆಯನ್ನು ವಹಿಸಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು ಅಂತಾ ಕಮಿಷನರ್ ಎನ್ ಶಶಿಕುಮಾರ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಕಳೆದ ಹಲವು ದಿನಗಳಿಂದ ಹು-ಧಾ ರಸ್ತೆ ಸೇರಿದಂತೆ BRTS ರಸ್ತೆಯಲ್ಲಿಯೂ ಕೂಡಾ ಅಪಘಾತಗಳು ಸಂಭವಿಸುತ್ತಿದೆ.ಇದಕ್ಕೆ ಕಾರಣ ವಾಹನ ಸವಾರರ ನಿರ್ಲಕ್ಷ್ಯ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ಇಲ್ಲದೇ ಇರೋದಕ್ಕೆ ಈ ಅಪಘಾತಗಳು ನಡೆಯುತ್ತಿವೆ.ಅದರಲ್ಲೂ ಕೂಡಾ ವಿದ್ಯಾವಂತರೆ ಅಪಘಾತಗಳನ್ನು ಮಾಡಿಕೊಳ್ಳುತ್ತಿರೋದು ಬೇಸರ ಸಂಗತಿ ಅಂತಾರೇ ಕಮಿಷನರ್ ಶಶಿಕುಮಾರ್.

ಈಗಾಗಲೇ ಎಲ್ಲೆಲ್ಲಿ ಅಪಘಾತಗಳು ಸಂಭವಿಸುತ್ತಿದೆ ಎಂಬುದರ ಕುರಿತು ಸಂಚಾರಿ ವಿಭಾಗದ ಡಿಸಿಪಿ ರವೀಶ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಲ್ಲೆಲ್ಲಿ ಸಂಚಾರಿ ನಿಯಮಗಳನ್ನು ಜಾರಿಗೆ ತರಬೇಕು ಎಂಬುದರ ಕುರಿತು ನಗರದ ವ್ಯಾಪಾರಸ್ಥರ ಜೊತೆ ಈಗಾಗಲೇ ಮಾತುಕತೆ ನಡೆದಿದ್ದು.ಆದಷ್ಟು ಬೇಗ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಜೊತೆಗೆ ಇದಕ್ಕೆ ಸಾರ್ವಜನಿಕರ ಸಹಾಯ ಕೂಡಾ ಅಗತ್ಯ ಅಂತಾ ಸಾರ್ವಜನಿಕರಿಗೆ ಕಮಿಷನರ್ ಕಿವಿ ಮಾತನ್ನು ಹೇಳಿದ್ದಾರೆ.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Suman K
Kshetra Samachara

Kshetra Samachara

19/12/2024 04:17 pm

Cinque Terre

45.65 K

Cinque Terre

8

ಸಂಬಂಧಿತ ಸುದ್ದಿ