ಧಾರವಾಡ: ಭಾನುವಾರ ಮುಗಿದು ಸೋಮವಾರ ಬರುವಷ್ಟರಲ್ಲಿ ಧಾರವಾಡದ ಅನೇಕ ಕಡೆಗಳಲ್ಲಿ ಭೀಕರ ರಸ್ತೆ ಅಪಘಾತಗಳು ಸಂಭವಿಸಿ ಎಂಟು ಜನ ಸಾವಿಗೀಡಾಗಿರುವ ಘಟನೆಗಳು ಸಂಭವಿಸಿದೆ.
ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಬಳಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ. ಧಾರವಾಡ ಮದಿಹಾಳದ ಅರುಣಸಿಂಗ್ ಹಾಗೂ ಶ್ರೀಶೈಲ ದೇಶಪಾಂಡೆ ಎಂಬುವವರು ಸಾವಿಗೀಡಾಗಿದ್ದು, ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಅಳ್ನಾವರ ಬಳಿ ಟಿಟಿ ವಾಹನ ಮತ್ತು ಗೂಡ್ಸ್ ವಾಹನದ ನಡುವೆ ಅಪಘಾತ ನಡೆದಿದ್ದು, ಮೂವರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಧಾರವಾಡ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಉತ್ತರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಸವಾರರಿಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಅಣ್ಣಿಗೇರಿ ಬಳಿ ಕಾರೊಂದು ಪಲ್ಟಿಯಾಗಿ ಕುಮಟಾ ಮೂಲದ ಓರ್ವ ಸಾವಿಗೀಡಾಗಿದ್ದಾನೆ. ಇದೆಲ್ಲರ ನಡಯವೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸಿಲಿಂಡರ್ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡು, ಕಿಮ್ಸಗೆ ದಾಖಲಾಗಿದ್ದಾರೆ.
Kshetra Samachara
24/12/2024 07:32 am