ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಶ್ವರ್ಯ ಮೇಲೆ ಚೈತ್ರಾ ಫುಲ್ ಗರಂ

ಬಿಗ್‌ ಬಾಸ್‌ ಮನೆ ಒಂದಲ್ಲ ಒಂದು ಟ್ವಿಸ್ಟ್ ಜನರಿಗೆ ಕೊಡುತ್ತಲೇ ಇರುತ್ತಾರೆ. ಕಳೆದ ವಾರ ತ್ರಿವಿಕ್ರಮ್‌ ಅವರನ್ನು ಆಚೆ ಕಳುಹಿಸುವ ಹಾಗೆ ಪ್ರ್ಯಾಂಕ್‌ ಎಲಿಮಿನೇಷನ್‌ ಮಾಡಲಾಗಿದ್ದು ಕಳೆದ ವಾರ ಯಾವುದೇ ಎಲಿಮಿನೇಷನ್‌ ನಡೆದಿಲ್ಲ.

ಇವತ್ತಿನ ಪ್ರೋಮೋದಲ್ಲಿ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯರು ಯಾರು ಎಂದು ಹೇಳಬೇಕು. ಅವರ ಮುಖಕ್ಕೆ ಕಾಫಿಯನ್ನು ಎಸೆಯಬೇಕು. ಮಂಜು ಅವರು ಗೌತಮಿ ಅವರ ಹೆಸರನ್ನು ಹೇಳಿ ಕಾಫಿಯನ್ನು ಮುಖಕ್ಕೆ ಎಸೆದಿದ್ದಾರೆ.

ಐಶ್ವರ್ಯ ಅವರು ಚೈತ್ರಾ ಅವರ ಹೆಸರು ಹೇಳಿದ್ದಾರೆ. ನಿಮ್ಮ ಆಟಗಳಿಗೆ ನಾನು ಬಲಿಪಶು ಆದೆ ಈ ವಾರ ಎಂದಿದ್ದು, ಇದಕ್ಕೆ ಚೈತ್ರಾ ಅವರು, ಟಾರ್ಗೆಟ್‌ ನಾಮಿನೇಷನ್‌ ಎನ್ನುವ ಮಾತು ಇದೇ ಐಶ್ವರ್ಯ ಅವರ ಬಾಯಿಯಿಂದಲೇ ಬಂದಿದ್ದು ಎಂದಿದ್ದಾರೆ.

ಐಶ್ವರ್ಯ ಅವರು, ಹೇ ತುಂಬಾ ಚೆನ್ನಾಗಿ ಸುಳ್ಳು ಹೇಳ್ತಾನೇ ಇದ್ದೀರಾ. ಬಾಯಿ ಮುಚ್ಚೆ ಸಾಕು ಎಂದು ಗರಂ ಆಗಿ ಹೇಳಿದ್ದಾರೆ. ಇತ್ತ ಚೈತ್ರಾ ಅವರು ನೀನ್ಯಾರು ನನಗೆ ಹೇ ಎನ್ನೋಕೆ. ಬಾಯಿ ಮುಚ್ಚು ಇಲ್ಲ ಹೇಳಿದ್ರೆ ಸುಮ್ಮನೇ ಇರಲ್ಲ. ಮುಚ್ಚುಕೊಂಡು ಇರು ನೀನು ಎಂದು ಚೈತ್ರಾ ಮೇಜಿಗೆ ಕೈ ಬಡಿದಿದ್ದು

ಒಡೆದು ಹೋಗಿದೆ. ಚೈತ್ರಾ ಅವರ ಕೋಪ ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ.

Edited By : Suman K
PublicNext

PublicNext

23/12/2024 02:14 pm

Cinque Terre

134.29 K

Cinque Terre

0