ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ್ ಆರೋಪಿಗಳಿಗೆ ಬೇಲ್ ಸಿಕ್ಕ ಬೆನ್ನಲ್ಲೆ ಇದೀಗ ಹತ್ಯೆ ಕೇಸ್‌ನ 17 ಆರೋಪಿಗಳಿಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.
ಇಂದು ಎ3 ಆರೋಪಿ ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಈ ಮೂವರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸಿಸಿಎಚ್ 57ರ ನ್ಯಾಯಾಲಯ ಬೇಲ್ ಮಂಜೂರು ಮಾಡಿ ಆದೇಶಿಸಿದೆ. ನಂದೀಶ್ ಪರ ಹಿರಿಯ ವಕೀಲ ರಾಮ್ ಸಿಂಗ್ ವಾದ ಮಂಡಿಸಿದ್ದಾರೆ.
ಒಟ್ಟಿನಲ್ಲಿ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿದ್ದ 17 ಆರೋಪಿಗಳಿಗೂ ಸದ್ಯ ಜಾಮೀನೂ ಮಂಜೂರಾಗಿದ್ದು, ರಿಲಿಫ್ ಆಗಿದ್ದಾರೆ.
PublicNext
23/12/2024 06:39 pm