ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ - 9 ಜನ ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಗಂಭೀರ

ಹುಬ್ಬಳ್ಳಿ: ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಪರಿಣಾಮ 9 ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ಉಣಕಲ್‌ನಲ್ಲಿ ಭಾನುವಾರ ರಾತ್ರಿ 1 ಗಂಟೆಗೆ ನಡೆದಿದೆ.

ಉಣಕಲ್‌ನ ಅಚ್ಚವ್ವನ ಕಾಲೋನಿಯಲ್ಲಿರುವ ಶಿವನ ದೇವಸ್ಥಾನದಲ್ಲಿ ಈ ಅವಘಡ ಸಂಭವಿಸಿದೆ. ನಿನ್ನೆ ರಾತ್ರಿ ಪೂಜೆಯನ್ನು ಮಾಡಿ ಮಲಗಿದ್ದ ಮಾಲಾಧಾರಿಗಳ ಪೈಕಿ ಓರ್ವ ಮಾಲಾಧಾರಿಯ ಕಾಲು ನಿದ್ದೆಗಣ್ಣಿನಲ್ಲಿ ಸ್ಟೋವ್‌ಗೆ ತಾಕಿ ಗ್ಯಾಸ್ ಲೀಕ್ ಆಗಲು ಶುರುವಾಗಿದೆ. ಇದರಿಂದ ದೇವಸ್ಥಾನದಲ್ಲಿ ದೀಪ ಇದ್ದ ಕಾರಣ ಒಮ್ಮೆಲೇ ಬೆಂಕಿ ಹೊತ್ತಿಕೊಂಡಿದೆ.

ದೇವಸ್ಥಾನಕ್ಕೆ ಒಂದೇ ಬಾಗಿಲು ಹಾಗೂ ಕಿಡಕಿ ಇದ್ದ ಕಾರಣ ಮಾಲಾಧಾರಿಗಳಿಗೆ ತಪ್ಪಿಸಿಕೊಳ್ಳಲು ಆಗಿಲ್ಲ. ಅಷ್ಟೇ ಅಲ್ಲದೇ ಮೈಮೇಲೆ ಯಾವುದೇ ಯಾವುದೇ ರೀತಿಯ ರಗ್ಗು, ಇಲ್ಲದ ಕಾರಣ ಬೆಂಕಿಯ ಮಾಲಾಧಾರಿಗಳ ಮೇಲೆ ಆವರಿಸಿದ ಪರಿಣಾಮ 9 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಸ್ಥಳೀಯರು ಗಾಯಗೊಂಡ 9 ಜನರನ್ನು ಕೂಡಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರೆ, ಇದರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಅಂತ ವೈದ್ಯರು ಹೇಳಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

-ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/12/2024 08:27 am

Cinque Terre

94.21 K

Cinque Terre

14

ಸಂಬಂಧಿತ ಸುದ್ದಿ