ಅಳ್ನಾವರ: ನಿನ್ನೆ ನಡೆದ ಪ್ರತಿಷ್ಠಿತ ದಿ ಅಳ್ನಾವರ ಅರ್ಬನ್ ಕೋ ಆಪ್ ಬ್ಯಾಂಕ್‌ನ ಮುಂಬರುವ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರುಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರಗತಿ ಸಹಕಾರ ಗುಂಪಿನ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಹದಿನೈದು ಸ್ಥಾನಗಳ ಪೈಕಿ ಆರು ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು,ಇನ್ನುಳಿದ 9 ಸಾಮಾನ್ಯ ಸ್ಥಾನಗಳಿಗೆ 12 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಹಿಂದಿನ ಆಡಳಿತ ಮಂಡಳಿಯವರೆ ಪುನರಾಯ್ಕೆಗೊಂಡಿದ್ದು ಕುತೂಹಲಕ್ಕೆ ತೆರೆ ಬಿದ್ದಿದೆ.
ಮುಂಜಾನೆ 9ರಿಂದ ಸಂಜೆ 4ರವರೆಗೆ ನಡೆದ ಮತದಾನದ ಬಳಿಕ ರಾತ್ರಿಯವರೆಗೂ ಮತ ಎಣಿಕೆ ನಡೆದು ರಿಟರ್ನಿಂಗ್ ಅಧಿಕಾರಿ ಸಹಕಾರ ಇಲಾಖೆಯ ಗಾಯತ್ರಿ ರಾಠೋಡ ಫಲಿತಾಂಶ ಪ್ರಕಟಿಸಿದರು. 2,864 ಸದಸ್ಯ ಮತದಾರರ ಪೈಕಿ 2072 ಜನರು ಮತದಾನ ಮಾಡಿದ್ದಾರೆ. ಸಿ.ಪಿ.ಐ ಸಮೀರ ಮುಲ್ಲಾ ಹಾಗೂ ಪಿ.ಎಸ್.ಐ ಪ್ರವೀಣ ನೇಸರಗಿ ನೇತೃತ್ವದ 24 ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣೆ ನಡೆಸಿದ್ದಾರೆ.
ಮಹಾಂತೇಶ ಪಠಾಣಿ
ಪಬ್ಲಿಕ್ ನೆಕ್ಸ್ಟ್ ಅಳ್ನಾವರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/12/2024 05:34 pm