ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಈಡೇರಿತು ರೈತರ ಬಹುದಿನಗಳ ಕನಸು, ಹದಗೆಟ್ಟ ರಸ್ತೆಗೆ ಸಿಕ್ಕಿತು ಮುಕ್ತಿ

ಧಾರವಾಡ : ಧಾರವಾಡ ತಾಲೂಕಿನ ಲೋಕೂರು ಗ್ರಾಮದ ಬೆಳ್ಳಹಳ್ಳದ ಹದಗೆಟ್ಟ ರಸ್ತೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ಹೌದು! ಲೋಕೂರು ಗ್ರಾಮದ ಬೆಳ್ಳಹಳ್ಳದ ಈ ರಸ್ತೆ ರೈತರಿಗೆ ನಿತ್ಯ ನರಕಯಾತನೆ ನೀಡುತ್ತಿತ್ತು. ಎತ್ತು, ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ಗಳು ಈ ರಸ್ತೆಯಲ್ಲಿ ಸಾಗಬೇಕು ಎಂದರೆ ಹೈರಾಣಾಗುತ್ತಿದ್ದವು. ಮಳೆಯಾದರೆ ಸಾಕು ಈ ಹೊಲದ ರಸ್ತೆ ಅಕ್ಷರಶಃ ಕೆಸರು ಗದ್ದೆಯಂತಾಗುತ್ತಿತ್ತು. ಈ ಹೊಲದ ರಸ್ತೆ ರಿಪೇರಿ ಮಾಡಿಕೊಡಿ ಎಂದು ರೈತರು ಅನೇಕ ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರು.

ಇದೀಗ ರೈತರ ಕನಸು ನನಸಾಗಿದೆ. ಬೆಳ್ಳಹಳ್ಳದ 1 ಕಿಲೋ ಮೀಟರ್ ರಸ್ತೆಯನ್ನು ಮುರ್ರಂ ಹಾಕಿ ಮೆಟ್ಲಿಂಗ್ ಮಾಡಲಾಗುತ್ತಿದೆ. ಶಾಸಕ ವಿನಯ್ ಕುಲಕರ್ಣಿ ಅವರ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆದಿದ್ದು, ರೈತರು ಫುಲ್ ಖುಷ್ ಆಗಿದ್ದಾರೆ.

ಸದ್ಯ ಈ ಹೊಲದ ರಸ್ತೆ ಸುಸಜ್ಜಿತವಾಗಿ ನಿರ್ಮಾಣವಾಗುತ್ತಿದೆ. ಕೇವಲ ಮೆಟ್ಲಿಂಗ್ ಅಷ್ಟೇ ಸಾಲದು ಮುಂದೆ ಡಾಂಬರು ರಸ್ತೆಯನ್ನೂ ಮಾಡಿಕೊಡಿ ಎಂದು ಈ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದ್ದು, ಶಾಸಕರು ಗ್ರಾಮಸ್ಥರ ಮನವಿಯನ್ನು ಪುರಸ್ಕರಿಸುತ್ತಾರಾ ಕಾದು ನೋಡಬೇಕಿದೆ.

Edited By : Shivu K
Kshetra Samachara

Kshetra Samachara

23/12/2024 02:45 pm

Cinque Terre

17.6 K

Cinque Terre

3

ಸಂಬಂಧಿತ ಸುದ್ದಿ