ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಬ್ಯಾನ್‌ಗೆ ಹೋರಾಟ - ವಿ.ಎಸ್.ವಿ.ಪ್ರಸಾದ್ ನೇತೃತ್ವದಲ್ಲಿ ಹೊತ್ತಿದ ಕಿಚ್ಚು

ಹುಬ್ಬಳ್ಳಿ: ಆನ್‌ಲೈನ್ ಬೆಟ್ಟಿಂಗ್..! ಆನ್‌ಲೈನ್ ಬೆಟ್ಟಿಂಗ್..! ಆನ್‌ಲೈನ್ ಬೆಟ್ಟಿಂಗ್..! ಯುವ ಸಮುದಾಯವನ್ನು ಸಂಕಷ್ಟಕ್ಕೆ ತಳ್ಳುತ್ತಿರುವ ಇದೊಂದು ಪಿಡುಗು. ಇಂತಹದೊಂದು ವ್ಯವಸ್ಥೆಯನ್ನು ಬೇರು ಮಟ್ಟದಿಂದಲೇ ಕಿತ್ತು ಹಾಕಲು ಸಮಾಜ ಸೇವಕರಾದ ಸ್ವರ್ಣಾ ಗ್ರೂಪ್ ಕಂಪನಿಯ ಮಾಲೀಕರಾದ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ನೇತೃತ್ವದಲ್ಲಿ ಹೋರಾಟದ ಕಿಚ್ಚು ಹೊತ್ತಿಕೊಂಡಿದೆ.

ಬಹುತೇಕ ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳು ಯುವ ಜನತೆಗೆ ಮಾರಕವಾಗಿದೆ. ಅದೆಷ್ಟೋ ಯುವ ಸಮುದಾಯದ ಬೆಟ್ಟಿಂಗ್ ಜಾಲದಲ್ಲಿ ಸಿಲುಕಿಕೊಂಡು ಜೀವ ಹಾಗೂ ಜೀವನವನ್ನೇ ಕಳೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಕೂಡಲೇ ಆನ್‌ಲೈನ್ ಗೇಮ್ ಬ್ಯಾನ್ ಮಾಡುವಂತೆ ಹುಬ್ಬಳ್ಳಿಯಲ್ಲಿ ಹೋರಾಟದ ಕಿಡಿಯೊಂದು ಹೊತ್ತಿಕೊಂಡಿದೆ. ಹೌದು.. ಡಾ.ಸಿ.ಎಚ್‌. ವಿ.ಎಸ್.ವಿ ಪ್ರಸಾದ್ ನೇತೃತ್ವದಲ್ಲಿ ಭಗತ್ ಸಿಂಗ್ ಸಂಘಟನೆಯಿಂದ ಹೋರಾಟ ಮುನ್ನಲೆಗೆ ಬಂದಿದ್ದು, ಸರ್ಕಾರ ಕೂಡಲೇ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಬ್ಯಾನ್ ಮಾಡುವಂತೆ ಹುಬ್ಬಳ್ಳಿಯಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಆನ್ಲೈನ್ ಬೆಟ್ಟಿಂಗ್ ಗೇಮ್ ಗಳು ಜನಜೀವನಕ್ಕೆ ಪೂರಕವಾಗಿರದೇ ಮಾರಕವಾಗಿರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ. ಆನ್‌ಲೈನ್ ಬೆಟ್ಟಿಂಗ್ ನಿಂದ ಯುವ ಸಮುದಾಯ ಕಾನೂನು ಬಾಹಿರ ಕೃತ್ಯಗಳತ್ತ ಹೆಜ್ಜೆ ಹಾಕುತ್ತಿರುವುದು ಖಂಡನೀಯವಾಗಿದೆ. ಕೂಡಲೇ ಸರ್ಕಾರದ ಆನ್‌ಲೈನ್ ಬೆಟ್ಟಿಂಗ್ ಗೇಮ್ ಹಾಗೂ ಆ್ಯಫ್ ಗಳನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು.

ಇನ್ನೂ ಯುವ ಜನರಿಗೆ ಆನ್‌ಲೈನ್ ಬೆಟ್ಟಿಂಗ್‌ಗಳು ಮಾರಕವಾಗಿವೆ. 2700 ಯುವಕರು ಇದೇ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಟ್ಟಿಂಗ್ ಆ್ಯಪ್‌ಗಳಿಂದ ಯುವಕರು, ಶಾಲಾ ವಿದ್ಯಾರ್ಥಿಗಳು ದಿನೇ ದಿನೇ ಬೆಟ್ಟಿಂಗ್ ಜಾಲಕ್ಕೆ ಸಿಲುಕಿ ತಮ್ಮ ಜೀವನವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಓರಿಸ್ಸಾ, ತೆಲಂಗಾಣ, ಆಸ್ಸಾಂ ರಾಜ್ಯಗಳು ಇಂತಹ ಆ್ಯಪ್‌ಗಳನ್ನ ಬ್ಯಾನ್ ಮಾಡಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಇಂತಗ ಆ್ಯಪ್‌ಗಳನ್ನ ನಿಷೇಧಿಸಬೇಕೆಂದು ಒತ್ತಾಯಿಸಿದರು.

ಒಟ್ಟಿನಲ್ಲಿ‌ ಪ್ರತಿಭಟನೆಯ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರ ಹೋರಾಟಗಾರರು. ಕೂಡಲೇ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ರಾಜ್ಯದಲ್ಲಿಯೂ ಬಂದ್ ಮಾಡುವಂತೆ ಆಗ್ರಹಿಸಿದರು.

ವರದಿ: ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/12/2024 04:03 pm

Cinque Terre

25.85 K

Cinque Terre

9

ಸಂಬಂಧಿತ ಸುದ್ದಿ