ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅಂಜನಾದ್ರಿ ಬೆಟ್ಟಕ್ಕೆ ಓಡುತ್ತಾ ಸಾಗುತ್ತಿರುವ ಸಾಹಸಿ ಯುವಕ

ನವಲಗುಂದ: ದೇವರ ಮೇಲೆ ಇಟ್ಟಿರುವ ಭಕ್ತಿಗೆ ಮಿಗಿಲಾದದ್ದು ಯಾವುದು ಇಲ್ಲ...ಅದರಲ್ಲೂ ಕೆಲವರು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳಿ ತಮ್ಮ ಭಕ್ತಿ ಸಮರ್ಪಣೆ ಮಾಡುವರು. ಆದರೆ ಇಲ್ಲೊಬ್ಬ ಯುವಕ ತಾನು ಓಡುವ ಮೂಲಕ ತನ್ನ ಭಕ್ತಿ ವ್ಯಕ್ತಪಡಿಸಿದ್ದಾನೆ.

ಹೌದು...ಈ ಸಾಹಸಿ ಯುವಕನ ಹೆಸರು ಮಲ್ಲಿಕಾರ್ಜುನಗೌಡ ಪಾಟೀಲ ಮೂಲತಃ ನವಲಗುಂದ ತಾಲೂಕಿನ ಯಮನೂರು ಗ್ರಾಮದವನಾಗಿದ್ದು, ತನ್ನ ಗ್ರಾಮದಿಂದ ಸುಮಾರು 150ಕಿಲೋಮೀಟರ್ ದೂರವಿರುವ ಅಂಜನಾದ್ರಿಗೆ ತನ್ನ ಪ್ರಯಾಣವನ್ನು ಓಡಿಕೊಂಡು ಹೋಗುವ ಮೂಲಕ ಸಾಹಸಿ ಎನ್ನಿಸಿಕೊಂಡಿದ್ದಾನೆ.

ಆಂಜನೇಯ ಭಕ್ತನಾದ ಈತ ಕಳೆದ ವಾರ ನಾನು ಓಡಿಕೊಂಡು ಹೋಗಬೇಕು ಎಂದು ಅಂದುಕೊಂಡು ಇಂದು ರಾತ್ರಿ ಮನೆಯವರ ಆಶೀರ್ವಾದ ಪಡೆದು ತನ್ನ ಪ್ರಯಾಣ ಬೆಳೆಸಿದ್ದಾನೆ. ಯುವಕನ ಪ್ರಕಾರ ತಾನು 20ತಾಸುಗಳಲ್ಲಿ ತಲುಪುವ ವಿಶ್ವಾಸ ಅವನಿಗಿದೆ.

Edited By : PublicNext Desk
Kshetra Samachara

Kshetra Samachara

21/12/2024 09:19 pm

Cinque Terre

28.67 K

Cinque Terre

6

ಸಂಬಂಧಿತ ಸುದ್ದಿ