ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಪಾಯದ ಅಂಚಿನಲ್ಲಿರುವ ಎಪಿಎಂಸಿ ಕಟ್ಟಡಗಳು ಶೀಘ್ರವೇ ನೆಲಸಮ !

ಕುಂದಗೋಳ : ಕುಂದಗೋಳ ಎಪಿಎಂಸಿ ಆವರಣದಲ್ಲಿ ಶಿಥಿಲಾವಸ್ಥೆ ತಲುಪಿ ಯಾವುದೇ ಕ್ಷಣದಲ್ಲಿ ಅಪಾಯ ತರುವ ಮತ್ತು ಬೀಳುವ ಹಂತದಲ್ಲಿರುವ ಹಳೇ ಕಟ್ಟಡಗಳನ್ನು ನೆಲಸಮ ಮಾಡಲು ಮತ್ತೊಮ್ಮೆ ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಹೌದು ! ಕುಂದಗೋಳ ಪಟ್ಟಣದ ಎಪಿಎಂಸಿ ಆವರಣದಲ್ಲಿ ಇತ್ತ ಉಪಯೋಗಕ್ಕೂ ಬಾರದೆ ಅತ್ತ ನೆಲಸಮವಾಗದೇ ಸ್ಥಳಾವಕಾಶ ಆಕ್ರಮಿಸಿ ಮತ್ತು ಇಂದು ನಾಳೆಯೋ ಬೀಳುವ ಹಂತದಲ್ಲಿರುವ ಕಟ್ಟಡವನ್ನು ನೆಲಸಮ ಮಾಡುವ ಉದ್ದೇಶದಿಂದ ಕಾರ್ಯದರ್ಶಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಪ್ರಸ್ತುತ ಎಂಪಿಎಂಸಿ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕ್ಯಾಂಟೀನ್, ಗೋದಾಮು, 5 ಚಿಕ್ಕ ಮಳಿಗೆಗಳನ್ನು 2024-25ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅಂದಾಜು 6 ಲಕ್ಷ 30 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ವಹಣೆ ಮಾಡಲು ಅನುಮತಿ ಕೋರಲಾಗಿದೆ.

ಈ ಹಿಂದೆ 2023-24ನೇ ಸಾಲಿನಲ್ಲಿ ಹಳೇ ಕಟ್ಟಡಗಳ ನಿರ್ವಹಣೆ ದರ ಪಟ್ಟಿ ವ್ಯತ್ಯಾಸವಾದ ಕಾರಣ ತಟಸ್ಥವಾಗಿದ್ದ ಹಳೇ ಕಟ್ಟಡಗಳ ಕಾರ್ಯಾಚರಣೆ ಈ ಆರ್ಥಿಕ ವರ್ಷದ ಆರಂಭದಲ್ಲಿ ಅಂದರೆ ಬೇಸಿಗೆಯಲ್ಲೇ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಲ್ಲಿ ಯಶಸ್ವಿಯಾಗಲಿದೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ, ಶ್ರೀಧರ್ ಪೂಜಾರ, ಕುಂದಗೋಳ

Edited By : Suman K
Kshetra Samachara

Kshetra Samachara

20/12/2024 03:37 pm

Cinque Terre

17.21 K

Cinque Terre

0

ಸಂಬಂಧಿತ ಸುದ್ದಿ