ಧಾರವಾಡ : ಧಾರವಾಡದ ಎಂ.ಬಿ ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ವಿಜಯಲಕ್ಷ್ಮೀ ಪಾಟೀಲ, ಇಂದಿನ ಜಾಗತೀಕರಣದಲ್ಲಿ ನಿರುದ್ಯೋಗದ ಪ್ರಮಾಣ ಪ್ರತಿ ವರ್ಷ ಹೆಚ್ಚುತ್ತಿದ್ದು, ಉದ್ಯೋಗ ಪಡೆಯಲು ಯುವ ಪೀಳಿಗೆ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಿದೆ. ಇಂಗ್ಲಿಷ್ ಕಲಿಕೆ ವರವಾಗಿ ಪರಿಣಮಿಸಿದೆ. ಉದ್ಯೋಗದ ಕೀಲಿ ಕೈ ಇಂಗ್ಲಿಷ್ ನಲ್ಲಿ ಇದೆ. ಇದನ್ನು ಮೆಟ್ಟಿಲು ಆಗಿ ಮಾಡಿ ಗುರಿ ತಲುಪಬಹುದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಹಾನಂದ ಹಿರೇಮಠ ಅವರು ಇಂಗ್ಲಿಷ್ ಭಾಷೆಯ ಅವಶ್ಯಕತೆ ಬಗ್ಗೆ ವಿವರಿಸಿದರು. ಎಸ್.ಎಸ್.ಸೂಡಿ, ಡಾ.ಬಿ.ಎಚ್.ಬುಳ್ಳಣ್ಣವರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Kshetra Samachara
19/12/2024 08:28 pm