ಉಡುಪಿ: ನಮ್ಮ ಧರ್ಮದ ಕುರಿತು ಅಭಿಮಾನ ಬೆಳೆಸಿಕೊಂಡರೆ ಇತರರ ದಾಳಿ, ಆಕ್ರಮಣ ಕಡಿಮೆಯಾಗುತ್ತದೆ. ದೇಹಕ್ಕೆ ರೋಗ ಬಂದಾಗ ವೈರಾಣು ಸಾಯಿಸುವ ಬದಲು ದೇಹಕ್ಕೆ ಪ್ರತಿರೋಧಕ ಶಕ್ತಿ ನೀಡಬೇಕು. ಅದರಂತೆ ವಿಶ್ವದ ಎಲ್ಲ ಸಮಸ್ಯೆಗಳ ನಿವಾರಣೆಗೆ ಭಗವದ್ಗೀತೆಯೇ ಪ್ರತಿರೋಧಕ ಶಕ್ತಿಯಾಗಿದೆ. ಭಗವದ್ಗೀತೆಯಿಂದ ಮಾತ್ರ ಭಾರತ ವಿಶ್ವ ಗುರು ಆಗಲು ಸಾಧ್ಯ. ಜಗತ್ತನ್ನೇ ಸುಸ್ಥಿತಿಯಲ್ಲಿ ಇಡುವ ಗೈಡ್ ಭಗವದ್ಗೀತೆಯಾಗಿದೆ ಎಂದು ಪುತ್ತಿಗೆ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದಿರುವ ಬೃಹತ್ ಗೀತೋತ್ಸವದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಎಂಎಲ್ಸಿ ಗೋ.ಮಧುಸೂದನ್ ವಿರಚಿತ 'ಶ್ರೀ ಭಗವಾನುವಾಚ' ಗ್ರಂಥ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭ ಮಂಗಳೂರಿನ ಉದ್ಯಮಿಗಳಾದ ಆರೂರು ಕಿಶೋರ್ ರಾವ್, ವಿಶ್ವನಾಥ ಭಟ್ ಪಾದೂರು ಇವರಿಗೆ 'ಶ್ರೀಕೃಷ್ಣಾನುಗ್ರಹ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸುರೇಂದ್ರ ವಾಗ್ಲೆ, ಮೈಸೂರಿನ ಚಿತ್ರ ಕಲಾವಿದ ಗಂಜೀಫ್ಹಾ ರಘುಪತಿ ಭಟ್, ಪುಸ್ತಕ ಪ್ರಕಾಶಕ ರಾಕೇಶ ರಾಜೇ ಅರಸ್, ಗ್ರಂಥ ಮುದ್ರಕ ಜೆ.ಬಿ. ಪಟ್ಟಾಭಿ, ಪತ್ರಿಕಾ ಅಂಕಣಕಾರ ಮೈಸೂರಿನ ಡಾ. ವಿ.ರಂಗನಾಥ್ ಉಪಸ್ಥಿತರಿದ್ದರು.
Kshetra Samachara
22/12/2024 01:30 pm