ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಟ್ಟುಪಾಡು ಮೀರಿ ದೈವ ನರ್ತನ ಸೇವೆಗೆ ಬುಗಿಲೆದ್ದ ಆಕ್ರೋಶ- ಕೋರ್ಟ್ ಮೆಟ್ಟಿಲೇರಿದ ಸಮಸ್ಯೆ

ಮಂಗಳೂರು: ದೈವಾರಾಧನೆಯಲ್ಲಿ 16ಸಮುದಾಯದ ಉಪಸ್ಥಿತಿ ಕಡ್ಡಾಯ. ಆದರೆ ದೈವ ನರ್ತನ ಸೇವೆಯಲ್ಲಿ ನಲಿಕೆ, ಪರವ ಹಾಗೂ ಪಂಬದ ಸಮುದಾಯದವರೇ ಮಾಡಬೇಕೆಂಬ ನಿಯಮವಿದೆ. ಆದರೆ ಬೆಳ್ತಂಗಡಿಯಲ್ಲೊಂದು ಕಡೆ ಕಟ್ಟುಪಾಡು ಮೀರಿ ದೈವನರ್ತನ ಸೇವೆಯಲ್ಲಿ ತೊಡಗಿರುವ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ.

2024ರ ಜನವರಿಯಲ್ಲಿ ಬೆಳ್ತಂಗಡಿಯಲ್ಲಿ

ದೈವಾರಾಧನೆಯ ಕಟ್ಟುಪಾಡು ಮೀರಿ ಮುಗೇರ ಸಮುದಾಯದ ಯುವಕನೋರ್ವನು ಗುಳಿಗ ದೈವದ ಕೋಲ ಕಟ್ಟಿದ್ದ. ಈ ವೇಳೆ ನಲಿಕೆ ಸಮುದಾಯದವರು ಅಲ್ಲಿಗೆ ಬಂದು ನಡೆಯುತ್ತಿದ್ದ ಕೋಲವನ್ನೇ ತಡೆದು ದೈವ ನರ್ತನ ಸೇವೆ ಕೈಗೊಂಡಿದ್ದ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿಚಾರ ತಾರಕಕ್ಕೇರುತ್ತಿದ್ದಂತೆ ಯುವಕ ಗುಳಿಗ ದೈವ ಹಾಗೂ ನಲಿಕೆ ಸಮಾಜದವರ ಕ್ಷಮೆ ಯಾಚಿಸಿದ್ದ. ಈ ಬಾರಿ ಮತ್ತೆ ಅಲ್ಲಿ ಗುಳಿಗ ದೈವದ ಕೋಲ ನಡೆಯುತ್ತಿದೆ. ಮುಗೇರ ಸಮುದಾಯದ ಯುವಕನೇ ಕೋಲ ಕಟ್ಟುತ್ತಾನೆ ಎಂಬ ವದಂತಿಯಿದೆ. ಆದ್ದರಿಂದ ಮತ್ತೆ ನಲಿಕೆ ಸಮುದಾಯ ಮಧ್ಯ ಪ್ರವೇಶಿಸಿ ಕೋಲ ತಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇದೇ ಕಾರಣಕ್ಕೆ ಉದ್ಭವ ಶ್ರೀಆದಿಲಿಂಗೇಶ್ವರ ಸೇವಾ ಟ್ರಸ್ಟ್ ಬೆಳ್ತಂಗಡಿ ಕೋರ್ಟ್ ಮೆಟ್ಟಿಲೇರಿದೆ. ನಲಿಕೆ ಸಮಾಜದಿಂದ ಗುಳಿಗ ಕೋಲಕ್ಕೆ ತಡೆಯಾಗದಂತೆ ಟ್ರಸ್ಟ್‌ ಕೋರ್ಟ್ ಮೊರೆಹೊಕ್ಕಿದೆ. ದೂರು ಸ್ವೀಕರಿಸಿದ ನ್ಯಾಯಾಲಯ ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ್ ಎಂಬವರಿಗೆ ಸಮನ್ಸ್ ಜಾರಿಗೊಳಿಸಿದೆ. ಈ ನಡುವೆ ಆರ್‌ಎಸ್ಎಸ್ ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಬರಮಾಡಿ ಚರ್ಚಿಸಿದೆ. ಚರ್ಚೆಯ ಬಳಿಕ ಹಿಂದೆ ಯಾವ ರೀತಿ ಕೋಲಕ್ಕೆ ಕಟ್ಟಲಾಗುತ್ತಿತ್ತೋ ಅದೇ ಮಾದರಿ ಮುಂದುವರಿಯಲಿ ಎಂಬಲ್ಲಿಗೆ ಪ್ರಕರಣ ಅಂತ್ಯಗೊಂಡಿದೆ ಎಂದು ಹೇಳಲಾಗುತ್ತಿದೆ.

Edited By : Vinayak Patil
Kshetra Samachara

Kshetra Samachara

20/12/2024 03:45 pm

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ