ಮಂಗಳೂರು: ವಿಧಾನ ಪರಿಷತ್ ಸದಸ್ಯ, ಬಿಜೆಪಿ ಲೀಡರ್ ಸಿಟಿ ರವಿ ಮಹಿಳೆ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಅಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷದಿಂದ ರಾಜ್ಯಾದ್ಯಂತ ಸಿಟಿ ರವಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ.
ಮಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಇದೇ ಲೂಟಿ ರವಿ ಮಹಿಳಾ ಸಚಿವರನ್ನು ಉದ್ದೇಶಿಸಿ ಅವಹೇಳನ,ಸಂವಿಧಾನ ವಿರೋಧಿ ಶಬ್ದವನ್ನು ಬಳಕೆ ಮಾಡ್ತಾರೆ. ಒಂದು ಹೆಣ್ಣಿಗೆ ಗೌರವ ಕೊಡ್ತೇವೆ ಹೆಣ್ಣು ಅಂದರೆ ಮಾತೆ. ಹೆಣ್ಣಿನ ಬಗ್ಗೆ ಅತ್ಯಂತ ಗೌರವ ಇದೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಯವರು,ಮತಕ್ಕಾಗಿ ಬಳಸಿಕೊಂಡು ಹೆಣ್ಮಕ್ಕಳ ಮೇಲೆ ದೌರ್ಜನ್ಯ ಮಾಡಿಕೊಂಡು ಬಂದಿರುವ ನಿಮಗೆ ಈ ಸಮಾಜದಲ್ಲಿ ರಾಜಿ ಪಕ್ಷವಾಗಿ ಇರಲು ಯಾವ ಅರ್ಹತೆ ಇಲ್ಲ.
ಸಿಟಿ ರವಿಯನ್ನು ಬಂಧಿಸಿ ಜೈಲಿಗಟ್ಟಬೇಕು, ಸದಸ್ಯತ್ವ ರದ್ದು ಮಾಡಬೇಕು ಬಿಜೆಪಿಯವರಿಗೆ ಮಾನ ಮರ್ಯದೆ ಇದ್ರೆ ಸಿಟಿ ರವಿಯನ್ನು ಪಕ್ಷದಿಂದ ಉಚ್ಚಾಟಿಸಿಬೇಕು ಎಂದು ಆಗ್ರಹಿಸಿದ್ರು. ಸದನದಲ್ಲಿ ಚಾಲೆಂಜ್ ಮಾಡಿದ್ದೇವೆ ಹೇ ಒಟಿ ರವಿ ಲೂಟಿ ರವಿ ಜೈ ಭೀಮ್ ಹೇಳು ಅಂತಾ ,ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನವರು ಸೋಲಿಸಿದ್ದಾರೆ ಅಂತಾರೆ ನಾಚಿಕೆ ಮರ್ಯಾದೆ ಇಲ್ಲದವರು ಎಂದು ವಾಗ್ದಾಳಿ ನಡೆಸಿದ್ರು ...
PublicNext
20/12/2024 03:15 pm