ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : ಹಂದಾಡಿ ಕುಮ್ರಗೋಡು ಸರ್ಕಾರಿ ಶಾಲೆಗೆ ಶತಮಾನೋತ್ಸವ ಸಂಭ್ರಮ

ಬ್ರಹ್ಮಾವರ: ಗ್ರಾಮೀಣ ಭಾಗವಾದ ಬ್ರಹ್ಮಾವರ ಬಳಿಯ ಹಂದಾಡಿ ಕುಮ್ರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿಗಳ ಮತ್ತು ಊರವರ ಸಹಕಾರದಿಂದ ಶತಮಾನೋತ್ಸವ ಸಂಭ್ರಮದಲ್ಲಿದೆ. 100 ವರ್ಷದ ಹಿಂದೆ ಮನೆಯೊಂದರಲ್ಲಿ ಆರಂಭಗೊಂಡ ಸರಕಾರಿ ಶಾಲೆಯಲ್ಲಿ ಲಕ್ಷಾಂತರ ಜನರು ಪ್ರಾಥಮಿಕ ಶಾಲಾ ಶಿಕ್ಷಣ ಪಡೆದು ದೇಶ ವಿದೇಶದಲ್ಲಿ ಶಿಕ್ಷಣ, ಜ್ಞಾನಿ, ವಿಜ್ಞಾನಿ,ಅಧಿಕಾರಿ ರೈತ,ಯೋಧ,ಶ್ರಮಜೀವಿ, ರಾಜಕಾರಣಿಗಳಾಗಿ ರಾಷ್ಟ್ರಕ್ಕೆ ಉತ್ತಮ ಕೊಡುಗೆ ನೀಡಿದವರಾಗಿದ್ದಾರೆ.

4.6 ಎಕ್ರೆ ವಿಸ್ತೀರ್ಣದ ವಿಶಾಲ ಜಾಗದಲ್ಲಿರುವ ಶಾಲೆಗೆ, ಪರಿಸರದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿಯಿಂದ ಶಾಲೆ ಮುಚ್ಚುವ ಸ್ಥಿತಿಯಲ್ಲಿರುವುದನ್ನು ಮನಗಂಡು ಹಳೆ ವಿದ್ಯಾರ್ಥಿಗಳು, ಪೋಷಕರು ಶತಮಾನೋತ್ಸವ ಸಮಿತಿಯವರು ಸೇರಿ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಿ,ಹಿಂದಿನ ಸರಕಾರದಿಂದ 2 ತರಗತಿ ಮತ್ತು ಹಳೆ ವಿದ್ಯಾರ್ಥಿಗಳಿಂದ 4 ತರಗತಿ ಒಟ್ಟು 6 ತರಗತಿ ಕೊಠಡಿಗಳು ಶತಮಾನೋತ್ಸವಕ್ಕೆ ಅರ್ಪಣೆಯಾಗಲಿದೆ.

ಶುಕ್ರವಾರ ಪೂಜಾ ಕಾರ್ಯ ನಡೆದು, ಶನಿವಾರ ಮತ್ತು ಭಾನುವಾರ ನಾನಾ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡು ಸಾಂಸ್ಕೃತಿಕ, ಮನೋನರಂಜನಾ ಕಾರ್ಯಕ್ರಮದೊಂದಿಗೆ ಊರ ಮತ್ತು ದೇಶ ವಿದೇಶದಲ್ಲಿರುವ ಹಳೆ ವಿದ್ಯಾರ್ಥಿಗಳ ಸಮ್ಮಿಲನದೊಂದಿಗೆ ಶತಮಾನೋತ್ಸವ ಜರುಗಲಿದೆ.

7 ಖಾಯಂ ಶಿಕ್ಷಕರು, 1 ಗೌರವ ಶಿಕ್ಷಕರು,ಎಲ್ ಕೆಜಿ, ಯು ಕೆಜಿ ತರಗತಿಗೆ 2 ಶಿಕ್ಷಕರು ಇದ್ದು, 170 ವಿದ್ಯಾರ್ಥಿಗಳು ಪ್ರಸ್ತುತ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್, ಬ್ರಹ್ಮಾವರ

Edited By : Manjunath H D
PublicNext

PublicNext

20/12/2024 04:35 pm

Cinque Terre

14.83 K

Cinque Terre

1

ಸಂಬಂಧಿತ ಸುದ್ದಿ