ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರದ ಪ್ರಮುಖ ರಸ್ತೆಯಲ್ಲೇ ಬಾವಿ ಕಾಮಗಾರಿ!- ಇದು ಅಕ್ರಮವೋ ? ಸಕ್ರಮವೋ ?

ಉಡುಪಿ: ಉಡುಪಿ ನಗರದ ಪ್ರಮುಖ ಸಾರ್ವಜನಿಕ ರಸ್ತೆಯ ಅಂಚಿನಲ್ಲಿಯೇ ಬಾವಿ ತೋಡುವ ಕಾಮಗಾರಿ ನಡೆಯುತ್ತಿದೆ. ನಗರದ ಜಾಮಿಯಾ ಮಸೀದಿ ರಸ್ತೆಯಲ್ಲಿ ಇದು ಕಂಡುಬಂದಿದೆ. ನಗರಸಭೆಯ ಕಾನೂನು ನಿಯಮಾವಳಿ ಉಲ್ಲಂಘಿಸಿ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

ಇದರ ಹತ್ತಿರದಲ್ಲೇ ಪಾದಚಾರಿ ರಸ್ತೆ ಕೂಡ ಇದೆ. ಬಾವಿ ನಿರ್ಮಾಣದ ಉದ್ದೇಶವು ಸ್ವಷ್ಟವಾಗಿ ಸಾರ್ವಜನಿಕರಿಗೆ ತಿಳಿದು ಬಂದಿಲ್ಲ. ಹಾಗಾಗಿ ಪೌರಾಯುಕ್ತರು ಸ್ಥಳಕ್ಕೆ ಬಂದು, ಕಾಮಗಾರಿ ಪರಿಶೀಲಿಸಿ ಸತ್ಯಾಂಶ ಅರಿತುಕೊಳ್ಳಬೇಕು. ನಗರದ ಜನತೆಗೆ ಇರುವ ಸಂಶಯ ನಿವಾರಿಸಬೇಕು ಎಂದು ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡು ಆಗ್ರಹ ಪಡಿಸಿದ್ದಾರೆ.

Edited By : Vinayak Patil
Kshetra Samachara

Kshetra Samachara

20/12/2024 10:09 pm

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ