ನಟಿ ಕೀರ್ತಿ ಸುರೇಶ್ ಇದೇ ತಿಂಗಳ 12 ರಂದು ಗೋವಾದಲ್ಲಿ ತಮ್ಮ ಗೆಳೆಯ ಆಂಟೋನಿ ಅವರನ್ನು ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಕಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಸದ್ಯ ಮದುವೆಯಾಗಿ ಒಂದು ವಾರವಾಗಿಲ್ಲವಾದ್ರೂ ನಟಿ ತಮ್ಮ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾದರು.
ಬೇಬಿ ಜಾನ್ ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ವರುಣ್ ಧವನ್ ನಟಿಸಿದ್ದಾರೆ. ಕೀರ್ತಿ ಸುರೇಶ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದು, ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಲೀಸ್ ನಿರ್ದೇಶನದ ಈ ಚಿತ್ರ ಕ್ರಿಸ್ಮಸ್ ಉಡುಗೊರೆಯಾಗಿ ಡಿಸೆಂಬರ್ 25 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಇತ್ತೀಚೆಗೆ ಮೇಕರ್ಸ್ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಕೀರ್ತಿ ಕೆಂಪು ಡ್ರೆಸ್ ಧರಿಸಿದ್ದರು. ಮೇಲಾಗಿ ಕೊರಳಲ್ಲಿ ಮಂಗಳಸೂತ್ರ ಹಾಕಿಕೊಂಡು ವಿಶೇಷ ಆಕರ್ಷಣೆಯಂತೆ ಕಾಣಿಸಿಕೊಂಡಿದ್ದಾರೆ.
PublicNext
20/12/2024 08:43 pm